30 ಅಡಕೆ ಮರ ಕತ್ತರಿಸಿ ಹಾಕಿದ ದುಷ್ಕರ್ಮಿಗಳು

21-hangala areca tree
Published on

ಹಾನಗಲ್ಲ: ತಾಲೂಕಿನ ಯಳವಟ್ಟಿ ಗ್ರಾಮದ ರೈತ ಶೀತಲ್ ಸುರೇಶ ನಡುವಿನಮನಿ ಎಂಬುವರ ಒಂದೂವರೆ ತೋಟದಲ್ಲಿನ 30ಕ್ಕೂ ಅಧಿಕ ಅಡಕೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಅಡಕೆ ಫಲ ರೈತನ ಕೈಗೆ ಬರುತ್ತಿತ್ತು. ಅಂಥ ಗಿಡಗಳನ್ನು ರಾತ್ರಿ ವೇಳೆ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಹಾನಗಲ್ಲ ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net