ಸ್ತ್ರೀ ಸಬಲೀಕರಣದಲ್ಲಿ ಸಂಘಟನೆ ಪಾತ್ರ ದೊಡ್ಡದು

12-HNL-SARASWATHI
Published on

ಹಾನಗಲ್ಲ: ಸ್ತ್ರೀ ಸಬಲೀಕರಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರ ದೊಡ್ಡದು. ಸರಸ್ವತಿ ಮಹಿಳಾ ಮಂಡಳ ಜನಪರ ಚಿಂತನೆಗಳ ಮೂಲಕ ಕ್ರಿಯಾಶೀಲ ಸಂಘಟನೆಯಾಗಿದೆ ಎಂದು ಮಂಡಳದ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ ಹೇಳಿದರು.
ಪಟ್ಟಣದ ಸರಸ್ವತಿ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ವಾರ್ಷಿಕ ಸರ್ವ ಸಾಧಾರಣಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
3 ವರ್ಷಗಳಿಂದ ಸರಸ್ವತಿ ಮಹಿಳಾ ಮಂಡಳವು ಮಹಿಳೆಯರ ಜೀವನೋಪಾಯದ ವಿವಿಧ ಚಟುವಟಕೆಗಳ ಕುರಿತು ತರಬೇತಿಗೊಳಿಸುವ ಮೂಲಕ ಮಂಡಳವನ್ನು ಸಶಕ್ತಗೊಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಡಳದ ಅಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಎಲ್ಲ ವಿಜ್ಞಾನವೂ ಅಡಗಿದೆ. ನಮ್ಮಲ್ಲಿನ ಅಜ್ಞಾನದಿಂದಾಗಿ ಧರ್ಮ-ಸಂಸ್ಕಾರಗಳಿಂದ ವಿಮುಖರಾಗುತ್ತಿದ್ದೇವೆ. ನಮ್ಮ ಸಂಘಟನೆ ಮುಖ್ಯವಾಗಿ ಸ್ತ್ರೀ ಸಂವೇದನೆಗಳನ್ನು ಶುದ್ಧಗೊಳಿಸುವಲ್ಲಿ ಶ್ರಮಿಸಬೇಕಿದೆ ಎಂದರು.
ನಿವೃತ್ತ ಉಪನ್ಯಾಸಕ ಮಾರುತಿ ಶಿಡ್ಲಾಪುರ, ಶಿಕ್ಷಕಿ ಸುನಿತಾ ಉಪ್ಪಿನ, ಅಕ್ಕಮ್ಮ ಶೆಟ್ಟರ್, ಸುಜಾತಾ ನಂದಿಶೆಟ್ಟರ್ ಮಾತನಾಡಿದರು. ವೀಣಾ ಗುಡಿ, ರೇಖಾ ಶೆಟ್ಟರ್, ಎಂ. ರಾಜೇಶ್ವರಿ ಲೀಲಾವತಿ ಗುಡಿ, ನಿರ್ಮಲಾ ಮಹಾರಾಜಪೇಟ, ಅನುಪಮಾ ಉಪ್ಪಿನ ಇದ್ದರು.
ನೂತನ ಪದಾಧಿಕಾರಿಗಳ ಆಯ್ಕೆ: ಸರಸ್ವತಿ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೀಲಮ್ಮ ಉದಾಸಿ ಗೌರವಾಧ್ಯಕ್ಷೆ, ಶಾರದಾ ಉದಾಸಿ ಅಧ್ಯಕ್ಷೆ, ಛಾಯಾ ದೇಶಪಾಂಡೆ ಉಪಾಧ್ಯಕ್ಷೆ, ಪುಷ್ಪಾ ಬಸ್ತಿ ಪ್ರಧಾನ ಕಾರ್ಯದರ್ಶಿ, ರೇಖಾ ಶೆಟ್ಟರ್ ಕೋಶಾಧ್ಯಕ್ಷೆ, ವೀಣಾ ಗುಡಿ ಕಾರ್ಯದರ್ಶಿ, ಅಕ್ಕಮ್ಮ ಶೆಟ್ಟರ್, ವಿಜಯಲಕ್ಷ್ಮೀ ಹಳ್ಳೀಕೇರಿ ಸಹಕಾರ್ಯದರ್ಶಿ ಹಾಗೂ ವಿಜಯಲಕ್ಷ್ಮೀ ಗುಡಗುಡಿ, ಶಾಂತಕ್ಕ ಹೊಳಲದ, ಅಕ್ಕಮ್ಮ ಕುಂಬಾರಿ, ವಿಜಯಕ್ಕ ಕಬ್ಬೂರ, ಸುಜಾತಾ ನಂದಿಶೆಟ್ಟರ್, ರೂಪಾ ಗೌಳಿ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net