ಹಾನಗಲ್ ಕುಮಾರಶ್ರೀಗಳಿಂದ ಶಿಕ್ಷಣ ಕ್ರಾಂತಿ: ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಬಣ್ಣನೆ

1809 Inauguration of Shilamantapa at Sridhargadde village
ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಶಿಲಾಮಂಟಪ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಜಗದ್ಗುರು ಡಾ.ಸಂಗಬಸವ ಸ್ವಾಮೀಜಿ ಉದ್ಘಾಟಿಸಿದರು.
Published on

ಬಳ್ಳಾರಿ: ಹಾನಗಲ್ ಕುಮಾರಶ್ರೀಗಳು ಕಲಿಯುಗದಲ್ಲಿ ಶಿಕ್ಷಣ ಕ್ರಾಂತಿ ಮೊಳಗಿಸಿದ ಯುಗಪುರುಷ ಎಂದು ಕಾಡಸಿದ್ಧೇಶ್ವರ ಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಶಿಲಾಮಂಟಪ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಶಿಕ್ಷಣದ ಜತೆಗೆ ಅನ್ನದಾಸೋಹ ಮಾಡಿದರು. ಕುಂಟುತ್ತ ಸಾಗಿದ್ದ ಸಮುದಾಯವನ್ನು ನೆಟ್ಟಗೆ ಮಾಡಿದ್ದು, ಹಾನಗಲ್ ಕುಮಾರಸ್ವಾಮಿಗಳು. ಅಖಿಲ ಭಾರತ ವೀರಶೈವ ಸಂಸ್ಥೆ ಕಟ್ಟಿ, ಅದಕ್ಕೆ ಮಾರ್ಗದರ್ಶನ ನೀಡಿ ಸಾವಿರಾರು ಮಹಾತ್ಮರನ್ನು ತಯಾರು ಮಾಡಿದರು. ಕರ್ನಾಟಕದುದಕ್ಕೂ ಶಿಕ್ಷಣ, ದಾಸೋಹ ಸೇರಿದಂತೆ ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಅವರ ಹೆಸರಿದೆ. ಅವರಿಗೆ ಅವರೇ ಸಾಟಿ ಎಂದು ಬಣ್ಣಿಸಿದರು.

ಎಂಎಲ್ಸಿ ಅಲ್ಲಂ ವೀರಭದ್ರಪ್ಪ, ಶಾಸಕ ಜೆ.ಎನ್.ಗಣೇಶ್ ಮಾತನಾಡಿದರು. ಜಗದ್ಗುರು ಡಾ.ಸಂಗಬಸವ ಸ್ವಾಮೀಜಿ, ವೀರೇಶ್ವರ ಜಂಗಮ ಪುರೋಹಿತ ಸಂಘದ ಅಧ್ಯಕ್ಷ ಬಿ.ಎಂ.ಈಶ್ವರಯ್ಯ ಸ್ವಾಮಿ, ಖೇಡಗಿ ವಿರಕ್ತ ಮಠದ ಶಿವಬಸವರಾಜೇಂದ್ರ ಸ್ವಾಮೀಜಿ, ಅಡವಿ ಅಮರೇಶ್ವರದ ಶಾಂತಮಲ್ಲ ಸ್ವಾಮೀಜಿ, ಶಾಸಕ ವೀರಣ್ಣ ಚರಂತಿಮಠ, ವೀವಿ ಸಂಘದ ಅಧ್ಯಕ್ಷ ಎಂ.ಗುರುಸಿದ್ಧಸ್ವಾಮಿ ಇತರರಿದ್ದರು.

ಸಾವಿರಾರು ಮಠಾಧಿಪತಿಗಳನ್ನು ಹುಟ್ಟುಹಾಕಿದ ಕೀರ್ತಿ ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ. ಶಿಕ್ಷಣದಿಂದ ಸಮಾಜದ ಅಂಕುಡೊಂಕುಗಳನ್ನು ತೊಲಗಿಸಿದರು. 20 ಮಠದ ಉತ್ತರಾಧಿಕಾರಿಗಳನ್ನು ನೇಮಕ ಮಾಡಿದ ಕೀರ್ತಿ ಜಗದ್ಗುರು ಡಾ.ಸಂಗಬಸವ ಸ್ವಾಮೀಜಿಗೆ ಸಲ್ಲುತ್ತದೆ.| ವೀರಣ್ಣ ಚರಂತಿಮಠ, ಶಾಸಕ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net