ಹಾನಗಲ್ಲ ನೈತಿಕ‌ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್; ಗ್ಯಾಂಗ್ ರೇಪ್ ಬಣ್ಣ ಬಯಲು; ಯುವತಿ ವಿಡಿಯೋ ವೈರಲ್

Gang Rape
Published on

ಹಾವೇರಿ: ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಜ.೮ರಂದು ನಡೆದಿದ್ದ ನೈತಿಕ‌ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನ್ಯ ಕೋಮಿನ ವ್ಯಕ್ತಿಯೊಂದಿಗೆ ಲಾಡ್ಜ್ ನಲ್ಲಿದ್ದ ಯುವತಿಯ ರಕ್ಷಿಸಲು ಹೋಗಿದ್ದ ಯುವಕರು ತನ್ನದೇ ಕೋಮಿನ ಯುವತಿಯ ಮೇಲೆ ಕಾಮುಕರಂತೆ ಎರಗಿ ಗ್ಯಾಂಗ್ ರೇಪ್ ಆಗಿರುವುದು ಬೆಳಕಿಗೆ ಬಂದಿದೆ.

ಬುಧವಾರ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದ ಹಾನಗಲ್ಲ ಪೊಲೀಸರು ಗ್ಯಾಂಗ್ ರೇಪ್ ಆಗಿಲ್ಲ ಎಂದಿದ್ದರು. ಇದೀಗ ಸಂತ್ರಸ್ತ ಯುವತಿಯೇ ವಿಡಿಯೋ ಮಾಡಿ ಸತ್ಯ ಬಯಲಿಗೆ ಎಳೆದಿದ್ದಾಳೆ.

ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಐದಾರು ಯುವಕರು ಅತ್ಯಾಚಾರ ಎಸಗಿದ್ದಾರೆ. ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿಕೊಂಡಿದ್ದಾಳೆ‌.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ಬಂಧನಕ್ಕೆ ಒತ್ತಡ ಹೆಚ್ಚಾಗಿದೆ. ಸಂತ್ರಸ್ತ ಯುವತಿಯನ್ನು ಪೊಲೀಸರು ಸದ್ಯ ಕೋಟ್೯ ಗೆ ಕರೆದೊಯ್ಯಲಾಗಿದೆ. ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net