ಹಂಪಿಯ ಪಾವಿತ್ರ್ಯಕ್ಕಿಲ್ಲ ಧಕ್ಕೆ

WhatsApp Image 2023-08-15 at 5.21.20 PM
Published on

* ಬೆರಳೆಣಿಕೆಯಷ್ಟು ಗಾಂಜಾ ಕೇಸ್, ವೇಶ್ಯಾವಾಟಿಕೆ ಇಲ್ಲವೇ ಇಲ್ಲ
* ಆಡಳಿತದ ಕಾರ್ಯವೈಖರಿಗೆ ಜನಾಕ್ರೋಶ

ವೀರೇಂದ್ರ ನಾಗಲದಿನ್ನಿ ಹೊಸಪೇಟೆ

ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಎಗ್ಗಿಲ್ಲದೇ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಇಲ್ಲಿನ ಜನತಾ ಪ್ಲಾಟ್‌ನಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುಕವಟಿಗೆಳಿಗೆ ಬ್ರೇಕ್ ಹಾಕಲಾಗಿದೆ. ಅಚ್ಚರಿ ಎಂದರೆ ವೇಶ್ಯಾವಟಿಕೆಗೆ ಸಂಬAಧಿಸಿ ಕಳೆದೊಂದು ದಶಕದಲ್ಲಿ ಒಂದೇ ಒಂದು ಪ್ರಕರಣವಿಲ್ಲ.

ಪಂಪಾ ಕ್ಷೇತ್ರದ ಪಾವಿತ್ರತೆ ಧಕ್ಕೆಯಾಗುತ್ತದೆ ಎಂಬ ಮಾತು ದಶಕಗಳಿಂದ ಕೇಳಿ ಬರುತ್ತಿದೆ. ಹಂಪಿ ಪಾವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ದಶಕದ ಹಿಂದೆ ಜಗದ್ಗುರು ಕೊಟ್ಟೂರು ಸಂಗನಬಸವ ಸ್ವಾಮೀಜಿ ಹೋರಾಟದ ಹೆಜ್ಜೆ ಹಿಟ್ಟಿದ್ದರು. ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದಿAದ ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಣಾಮ ಹಂಪಿಯಲ್ಲಿ ಪೊಲೀಸ್ ಕ್ರಮಗಳು ಬಿಗಿಯಾಗಿದ್ದು, ಸ್ಥಳೀಯರಲ್ಲೂ ಕಾನೂನು ಅರಿವು ಮೂಡಿಸಿದ್ದರಿಂದ ಅನೈತಿಕ ಚಟುವಟಿಕೆಗಳು ನಿರ್ಮೂಲನೆಗೊಂಡಿವೆ ಎನ್ನಲಾಗಿದೆ. ಆದರೂ, ಪಂಪಾ ಕ್ಷೇತ್ರದಲ್ಲಿ ಅಕ್ರಮ, ಅನೈತಿಕ ಚಟುವಟಿಕೆ ನಡೆಯುತ್ತವೆ ಎಂಬ ಆರೋಪ ಸಾರ್ವತ್ರಿಕವಾಗಿದೆ. ಈ ವಿಚಾರ ಇತ್ತೀಚೆಗೆ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿತ್ತು.

ವೇಶ್ಯಾವಾಟಿಕೆ ಪ್ರಕರಣಗಳೇ ಇಲ್ಲ:

ವಿಶ್ವಪಾರಂಪರಿಕ ತಾಣ ಹಂಪಿಗೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ವೇಶ್ಯಾವಾಟಿಕೆ ಮತ್ತು ಮಾದಕ ವಸ್ತುಗಳ ಅಕ್ರಮ ವ್ಯಾಪಾರ ನಡೆಯುತ್ತದೆ ಎಂದ ಅಪವಾದ ದಶಕಗಳಿಂದ ಇದ್ದೇ ಇದೆ. ಅದರೊಂದಿಗೆ ಹವಾಮಾ ವಿರುದ್ಧ ಕೋರ್ಟ್ನಲ್ಲಿ ದಾಖಲಾದ ನ್ಯಾಯಾಂಗ ನಿಂದನೆ ಅರ್ಜಿ ಹಿನ್ನೆಲೆಯಲ್ಲಿ ಹಂಪಿಯ ಜನತಾ ಪ್ಲಾಟ್‌ನಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ತಡೆಯೊಡ್ಡಿದೆ. ಇದರಿಂದ ಸತ್ಯಾಂಶ ಅರಿಯಲು ಸ್ಥಳೀಯ ನಿವಾಸಿ ವಿರೂಪಾಕ್ಷಪ್ಪ ಎಂಬುವವರು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಆರ್‌ಟಿಐ ಅಡಿ ಮಾಹಿತಿ ಪಡೆದಿದ್ದು, ಅಚ್ಚರಿಯ ಅಂಶ ಬೆಳಕಿಗೆ ಬಂದಿವೆ.

ಇಲ್ಲಿನ ಜನತಾ ಪ್ಲಾಟ್ ನಿವಾಸಿಗಳ ಮೇಲೆ ಕಳೆದ ೨೦೧೦ ರಿಂದ ೨೦೨೩ರ ವರೆಗೆ ವೇಶ್ಯಾವಾಟಿಕೆ ಮತ್ತು ಗಾಂಜಾ, ಚರಸ್ಗೆ ಸಂಬAಧಿಸಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಪ್ರಶ್ನಿಸಿದರು. ಅದಕ್ಕೆ ೨೦೨೩ರ ಆಗಸ್ಟ್ ೨೨ ರಂದು ದಾಖಲೆ ಸಹಿತ ಮಾಹಿತಿ ನೀಡಿರುವ ಅಧಿಕಾರಿಗಳು, ವೇಶ್ಯಾವಾಟಿಕೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಗಾಂಜಾ ಚರಸ್‌ಗೆ ಸಂಬAಧಿಸಿ 10 ಪುಟಗಳ ಮಾಹಿತಿ ಒದಗಿಸಿದ್ದಾರೆ. ಅದರಲ್ಲಿ ನಾಲ್ಕು ಪ್ರಕರಣಗಳಿವೆ. ಒಂದರಲ್ಲಿ ಪ್ರರಕಣದಲ್ಲಿ ಆರೋಪಿ ಹೆಸರು, ವಿಳಾಸ, ಪತ್ತೆಯಾದ ಸ್ವತ್ತಿನ ಮಾಹಿತಿಯೇ ಇಲ್ಲ. ಕೇವಲ ಮಾಹಿತಿ ಆಧರಿಸಿ ದೂರು ದಾಖಲಿಸಲಾಗಿದೆ.

29 ಹಳ್ಳಿಗಳಿಗೆ ತಟ್ಟಿದ ಬಿಸಿ:

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವಿರುದ್ಧ ಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗುತ್ತಿ ದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹಂಪಿ, ಹೊಸ ಹಂಪಿ, ಕಡ್ಡಿರಾಂಪುರ, ಸಣಾಪುರ, ಕಮಲಾಪುರ, ವೆಂಕಟಾಪುರ ಸೇರಿ 15 ಹಾಗೂ ಕೊಪ್ಪಳ ಭಾಗದ ಹನಮನಹಳ್ಳಿ, ವಿರುಪಾಪುರ ಗಡ್ಡಿ, ಸಂಗಾಪುರ 14 ಸೇರಿದಂತೆ 29 ಹಳ್ಳಿಗಳಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ ಪ್ರವಾಸೋದ್ಯಮವನ್ನೇ ಅವಲಂಭಿಸಿರುವ ಹಂಪಿ ಜನತಾ ಪ್ಲಾಟ್ ನಿವಾಸಿಗಳಿಗೆ ಹೆಚ್ಚು ಪರಿಣಾಮ ಬೀರಿದ್ದು, ಉದ್ಯೋಗವಿಲ್ಲದೇ ಕಳೆದ ಎರಡು ತಿಂಗಳಿAದ ಕಣ್ಣೀರಿಡುತ್ತಿದ್ದಾರೆ.

ಹಂಪಿ ಪಾವಿತ್ರತೆ ಕಾಪಾಡಬೇಕು ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ಒತ್ತಾಯವಾಗಿತ್ತು. ಕೋರ್ಟ್ ಸೂಚನೆಯಂತೆ ೨೦೧೧ರಲ್ಲಿ ಹಂಪಿ ದೇವಸ್ಥಾನ ಮುಂಭಾಗದ ಮನೆ ಗಳನ್ನು ತೆರವುಗೊಳಿಸಿದ್ದಾರೆ. ಆನಂತರ ಅಕ್ರಮ, ಅನೈತಿಕ ಚಟುವಟಿಕೆಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಪೂಜ್ಯರು ಲಿಂಗೈಕ್ಯರಾದ ಬಳಿಕ ನಮ್ಮ ಗಮನಕ್ಕೆ ತಾರದೇ ಹತ್ತಾರು ಹಳ್ಳಿಗರಿಗೆ ನೋಟಿಸ್ ನೀಡಿದ್ದು ಸರಿಯಲ್ಲ. ಪ್ರಕರಣದ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯುತ್ತೇನೆ. ಅವಕಾಶವಿದ್ದರೆ, ಈಗಾಗಲೇ ಸರ್ಕಾರ ಕೈಗೊಂಡ ಕ್ರಮ ಸಂತೃಪ್ತಿಯಿದೆ ಎಂದು ಕೋರ್ಟ್ಗೆ ತಿಳಿಸಿ, ನಮ್ಮ ದೂರು ಹಿಂಪಡೆಯುತ್ತೇವೆ. - ಜಗದ್ಗುರು ಕೊಟ್ಟೂರ ಬಸವಲಿಂಗ ಸ್ವಾಮೀಜಿ, ಕೊಟ್ಟೂರು ಸಂಸ್ಥಾನ ಮಠ, ಹೊಸಪೇಟೆ.

ಹಂಪಿಯಲ್ಲಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ, ಹಂಪಿಯಲ್ಲಿ ಯಾವುದೇ ರೀತಿ ಅನೈತಿಕ ಹಾಗೂ ಡ್ರಗ್ಸ್ ಮತ್ತು ಗಾಂಜಾಚರಸ್ ನಡೆಯುತ್ತಿಲ್ಲ, ಈಗಲಾದರೂ ಸರ್ಕಾರ ಎಚ್ಚೆತ್ತಿಕೊಂಡು ಮೂಲ ನಿವಾಸಿಗಳಿಗೆ ಬದುಕಲು ಅವಕಾಶವನ್ನು ಕಲ್ಪಿಸಿ ಕೊಡಬೇಕು. - ಸುಜಾತಮ್ಮ, ಸ್ಥಳೀಯ ನಿವಾಸಿ. ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ಗಳು ತೆರವುಗೊಂಡ ಬಳಿಕ ಹಂಪಿ ಭಾಗದಲ್ಲಿ ಗುರುತರವಾದ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಿಲ್ಲ. ನಾನು ಹೊಸದಾಗಿ ಜಿಲ್ಲೆಗೆ ಎಸ್ಪಿಯಾಗಿ ಬಂದ ನಂತರ ನಮ್ಮ ಸಿಬ್ಬಂದಿ ಮೂಲಕ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ವೇಶ್ಯಾವಾಟಿಕೆ ಮತ್ತಿತರೆ ಅಕ್ರಮಗಳು ಕಂಡು ಬಾರದಿರುವುದು ನಮಗೂ ತೃಪ್ತಿಯಿದೆ. ಆದರೂ, ಅಂತಹ ಆರೋಪಗಳು ಕಂಡು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ, ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ. ಶ್ರೀಹರಿಬಾಬ ಬಿ.ಎಲ್., ಎಸ್ಪಿ ವಿಜಯನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net