ಹಂಪಿನಕಟ್ಟೆ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಪರದಾಟ

Published on

ಮರಿಯಮ್ಮನಹಳ್ಳಿ: ಸ್ಮಶಾನಕ್ಕೆ ದಾರಿ ಬಿಡದೇ ವ್ಯಕ್ತಿಯೊಬ್ಬರು ತಂತಿ ಬೇಲಿ ಹಾಕಿದ ಘಟನೆ ಸಮೀಪದ ಹಂಪಿನಕಟ್ಟೆ ಗ್ರಾಮದ ಬಳಿ ಶನಿವಾರ ನಡೆದಿದೆ.

ಗ್ರಾಮದ ವ್ಯಕ್ತಿಯೊಬ್ಬರು ಭಾನುವಾರ ಮೃತರಾಗಿದ್ದರು. ಅಂತ್ಯ ಸಂಸ್ಕಾರಕ್ಕೆ ಹೋಗುವ ವೇಳೆ ರಸ್ತೆಗೆ ತಂತಿ ಬೇಲಿ ಹಾಕಲಾಗಿತ್ತು. ದಾರಿ ಇಲ್ಲದೇ ಮಧ್ಯದಲ್ಲೇ ಹೆಣ ಹೊತ್ತು ನಿಂತ ಮೃತ ವ್ಯಕ್ತಿಯ ಸಂಬಂಧಿಕರು ಪರದಾಡಿದರು. ಹಲವು ವರ್ಷಗಳಿಂದ ಜಮೀನಿನ ರಸ್ತೆ ಮೂಲಕ ಸ್ಮಶಾನಕ್ಕೆ ಹೋಗಲಾಗುತ್ತಿತ್ತು.

ಮುಸ್ಲಿಂ ಸಮುದಾಯದವರು ಯಾರೇ ಮೃತಪಟ್ಟರೂ ಇದೇ ಸ್ಮಶಾನದಲ್ಲಿ ಹೂಳಲಾಗುತ್ತಿತ್ತು. ನಮ್ಮ ಜಮೀನು ರಸ್ತೆಯ ಮೂಲಕ ಸ್ಮಶಾನಕ್ಕೆ ಹೋಗೋದಕ್ಕೆ ದಾರಿ ಬಿಡೋದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಇದರಿಂದ ಪಕ್ಕದ ಜಮೀನಿನಲ್ಲಿ ಸುತ್ತು ಹಾಕಿಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಲಾಯಿತು.

ಮಾಹಿತಿ ತಿಳಿಯುತ್ತಿದ್ದಂತೆ ಉಪ ತಹಸೀಲ್ದಾರ್ ಶ್ರೀಧರ ಅವರು ಭಾನುವಾರ ಖಾಸಗಿ ಜಮೀನಿನ ಮಾಲೀಕ ಹಾಕಿದ್ದ ತಂತಿ ಬೇಲಿ ತೆರವು ಮಾಡಿಸಿದರು. ಯಥಾ ಸ್ಥಿತಿ ಮುಂದುವರೆಯುವಂತೆ ಖಾಸಗಿ ಜಮೀನಿನ ಮಾಲೀಕರಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net