ವಿರೂಪಾಕ್ಷೇಶ್ವರ ದೇಗುಲದಲ್ಲಿ ಸ್ವಚ್ಛತೆ

23 MANJU 01
Published on

ಹೊಸಪೇಟೆ: ದಕ್ಷಿಣಕಾಶಿ ಹಂಪಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇಗುಲದಲ್ಲಿ ಇತ್ತೀಚೆಗೆ ನಡೆದ ಫಲಪೂಜಾ ಮಹೋತ್ಸವದ ನಿಮಿತ್ತ ನಡೆದ ದೀಪೋತ್ಸವದಿಂದ ಎಣ್ಣೆ ಜಿಡ್ಡಾಗಿದ್ದ ಆವರಣವನ್ನು ಸೋಮವಾರ ಸಿಬ್ಬಂದಿ ಸ್ವಚ್ಛತೆ ಮಾಡಿದರು.

ದೇಗುಲದಲ್ಲಿ ಒಂದಲ್ಲಾ ಒಂದು ರೀತಿಯ ಭಕ್ತಿ ಕಾರ್ಯಕ್ರಮಗಳು ನಡೆದು ದೀಪಗಳನ್ನು ಹಚ್ಚುವುದರಿಂದ ದೇವಾಲಯದ ಚೇಗುಲ ಎಣ್ಣೆ ಜಿಡ್ಡಿನಿಂದ ಕೂಡಿ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಓಡಾಡಲು ತೊಂದರೆಯಾಗುತ್ತಿತ್ತು. ದೇವಾಲಯ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ನೀರು ಹಾಕಿ ತೊಳೆದು, ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದರು. ಎಣ್ಣೆ ಜಿಡ್ಡು ಹೋಗಲ ದೇಗುಲದ ಚೇಗುಲದಲ್ಲಿ ಮರದ ಹೊಟ್ಟು ಹಾಕಲಾಗಿತ್ತು. ಇದರಿಂದ ಸುಲಭವಾಗಿ ಎಣ್ಣೆ ಜಿಡ್ಡನ್ನು ತೆಗೆಯಬಹದು. ಭಾನುವಾರ ಸಬ್ಬಿನ ಪೂಡಿ ಹಾಕಿ ದೇಗುಲ ಸ್ವಚ್ಛತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net