ಹಂಪಿಯ ವಿಜಯವಿಠ್ಠಲ ದೇವಸ್ಥಾನದಲ್ಲಿ ಕಲ್ಲಿನ ಹಾಸುಗಳ ಜೋಡಿಸಲು ಟ್ರ್ಯಾಕ್ಟರ್ ಬಳಕೆ

160520 Hampi Vittala Temple Ground Stone Repair
Published on

ಹೊಸಪೇಟೆ: ಹಂಪಿ ವಿಜಯವಿಠ್ಠಲ ದೇವಸ್ಥಾನ ಸೇರಿ ಸ್ಮಾರಕಗಳ ವೀಕ್ಷಣೆಗೆ ವಾಹನಗಳ ನಿಷೇಧಿಸಿರುವ ಭಾರತೀಯ ಪುರಾತತ್ವ ಇಲಾಖೆ, ದೇವಾಲಯದ ಆವರಣದೊಳಗೆ ಟ್ರ್ಯಾಕ್ಟರ್ ಬಳಸಿ ಕಾಮಗಾರಿ ನಡೆಸಲು ಅವಕಾಶ ನೀಡಿರುವುದು ಜನರ ಟೀಕೆಗೆ ಗುರಿಯಾಗಿದೆ.

ಹಂಪಿಯ ಕೇಂದ್ರಬಿಂದು ಕಲ್ಲಿನ ರಥವಿರುವ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳಬೇಕೆಂದರೆ ಪ್ರವಾಸಿಗರು ವಾಹನಗಳನ್ನು ಗೆಜ್ಜಲ ಮಂಟಪದ ಬಳಿ ಬಿಟ್ಟು ಪ್ರತ್ಯೇಕ ಹಣ ನೀಡಿ ಬ್ಯಾಟರಿ ವಾಹನದಲ್ಲಿ ಸಂಚರಿಸಬೇಕು ಎಂಬ ಎಎಸ್‌ಐ ಕಡ್ಡಾಯ ನಿಯಮ ವಿಧಿಸಿದೆ. ಐತಿಹಾಸಿಕ ಸ್ಮಾರಕಗಳಿಗೆ ಧಕ್ಕೆಯುಂಟಾಗುತ್ತದೆಂದು ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೆ, ದೇವಾಲಯದ ಆವರಣದಲ್ಲಿ ಕಲ್ಲಿನ ಹಾಸುಗಳನ್ನು ಕಿತ್ತು ಸರಿಪಡಿಸಲು ಗುತ್ತಿಗೆದಾರರಿಗೆ ಟ್ರಾೃಕ್ಟರ್ ಬಳಸಲು ಅವಕಾಶ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪುರಾತತ್ವ ಇಲಾಖೆ ಹಂಪಿ ವೃತ್ತದ ಉಪ ಅಧೀಕ್ಷಕರಿಗೆ ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net