ಗಣೇಶ ಅಲಂಕಾರದಲ್ಲಿ ಹಂಪಿ ವೈಭವ

IMG-20240911-WA0011.jpg
Published on

ಹುಬ್ಬಳ್ಳಿ: ಇಲ್ಲಿಯ ಡಾ. ಡಿ.ಎಸ್. ಕರ್ಕಿ ಅವರ ಭಾವತೀರ್ಥ ಸಂಕಲನದಲ್ಲಿ "ತುಂಗಭದ್ರೆಯ ಹಾಡು' ಎನ್ನುವ ಕವಿತೆಯಿಂದ ಪ್ರೇರೇಪಣೆಗೊಂಡು ಅವರ ಮೊಮ್ಮಗ ಸಂತೋಷ್ ಕರ್ಕಿ ಅವರು ತಮ್ಮ ಮನೆಯಲ್ಲಿ ತುಂಗಭದ್ರಾ ನದಿ ದಡದಲ್ಲಿರುವ ಹಂಪಿಯ ವೈಭವವನ್ನು ಗಣೇಶ ಅಲಂಕಾರಕ್ಕೆ ಚಿತ್ರಿಸಿದ್ದಾರೆ.

ಅಂಜನಾದ್ರಿ ಬೆಟ್ಟ, ವಿಜಯ ವಿಠ್ಠಲ ದೇವಸ್ಥಾನ, ಹಂಪಿ ರಥ, ಲೋಟಸ್ ಮಹಲ್, ವಿರೂಪಾಕ್ಷ ದೇವಾಲಯ, ನರಸಿಂಹ, ಕಡಲೆಕಾಳು ಗಣೇಶ, ಗುಡ್ಡ ಬಂಡೆಗಳ ನಡುವೆ ಹರಿದು ಬರುವ ತುಂಗಭದ್ರೆ ಎಲ್ಲವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ನೂರಾರು ಜನರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net