ಉತ್ತರಾಧಿಮಠದಿಂದ ಶ್ರೀ ನರಹರಿ ತೀರ್ಥರ ಮಧ್ಯಾರಾಧನೆ

21 MANJU 02
Published on

ಹೊಸಪೇಟೆ:  ಶ್ರೀ ನರಹರಿ ತೀರ್ಥರ ಆರಾಧನಾ ಮಹೋತ್ಸವದ ನಿಮಿತ್ತ ಹಂಪಿಯ ನಡುಗಡ್ಡೆಯಲ್ಲಿ ಉತ್ತರಾಧಿಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಮಧ್ಯಾರಾಧನೆ ಜರುಗಿತು.

ಶ್ರೀ ನರಹರಿ ತೀರ್ಥರ ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ ಮೂಲವೃಂದಾವನದಲ್ಲಿ ಪ್ರಾತಃ ಪ್ರಾರ್ಥನೆ, ದಂಡೋದಕ, ಪಾದೋದಿಕ ಸ್ನಾನ, ಶ್ರೀಮನ್ ನ್ಯಾಯಸುಧಾ ಪಾಠ, ಭಕ್ತರಿಗೆ ಮುದ್ರಾಧಾರಣೆ, ಜ್ಞಾನಸತ್ರ, ಉತ್ತರಾದಿಮಠದ ಸಂಸ್ಥಾನ ಪೂಜೆ, ವಿದ್ಯಾರ್ಥಿಗಳ ಅನುವಾದ, ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಹಾಗೇ ಶ್ರೀ ನರಹರಿ ತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸತ್ಯಾತ್ಮತೀರ್ಥರಿಂದ ಭಕ್ತರಿಗೆ ಅನುಗ್ರಹ ಸಂದೇಶ, ವಿದ್ಯಾರ್ಥಿಗಳ ಅನುವಾದ, ವೇದಾಂತ ಗ್ರಂಥಗಳ ಪಾಠ, ಸ್ವಸ್ತಿವಾಚನ ಕಾರ್ಯಕ್ರಮ ಜರುಗಿದವು.

ಶ್ರೀ ನರಹರಿ ತೀರ್ಥರ ಪೂಜಾ ವಿಚಾರದಲ್ಲಿ ರಾಯರಮಠ ಹಾಗೂ ಉತ್ತರಾದಿ ಮಠದ ನಡೆವೆ ತಲಾಂತರದಿಂದ ವಿವಾದ ನಡೆದಿದೆ. ರಾಯರ ಮಠಕ್ಕೆ ನ್ಯಾಯಾಲಯದಿಂದ ಹಾಕಿದ ನಿರ್ಬಂಧ ಉಚ್ಚನ್ಯಾಯಾಲಯ ಇತ್ತೀಚೆಗೆ ತೆರವು ಮಾಡಿತು. ಶ್ರೀ ನರಹರಿ ತೀರ್ಥರ ಪೂರ್ವಾರಾಧನೆ ರಾಯರಮಠದಿಂದ ಜರುಗಿತು. ಮತ್ತೆ ಸೋಮವಾರ ಉತ್ತರಾಧಿಮಠದ ಪರವಾಗಿ ಮಧ್ಯಾಂತರ ಆದೇಶ ಹಿನ್ನಲೆ ಉತ್ತರಾಧಿಮಠದಿಂದ ಸೋಮವಾರ ಮಧ್ಯಾಹ್ನ ಪೂರ್ವಾರಾಧನೆ ಹಾಗೂ ಮಂಗಳವಾರ ಮಧ್ಯಾರಾಧನೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net