ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆ

Published on

ಹೊಸಪೇಟೆ: ಹಂಪಿ ಉತ್ಸವದ ನಿಮಿತ್ತ ಗ್ರಾಮೀಣ ಕ್ರೀಡಾಕೂಟಗಳಾದ ಕುಸ್ತಿ, ಬಂಡಿಗಾಲಿ ತೊಡಿಸುವ ಸ್ಪರ್ಧೆ ಮತ್ತು ಗುಂಡು ಎತ್ತುವ ಸ್ಪರ್ಧೆಗಳನ್ನು ಮಾ.01 ರಂದು ಹೊಸ ಮಲಪನಗುಡಿ ಗ್ರಾಮದ ಶ್ರೀವಿಜಯ ವಿದ್ಯಾರಣ್ಯ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಹಂಪಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಉಮೇಶ್ ಮೈನಳ್ಳಿ ತಿಳಿಸಿದ್ದಾರೆ.

ಮಟ್ಟದ ಪುರುಷ, ಮಹಿಳಾ ಮತ್ತು ಜಿಲ್ಲಾ ಮಟ್ಟದ ಪುರುಷ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು, ಕುಸ್ತಿಯು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ರಾಜ್ಯ ಮಟ್ಟದ ಪುರುಷÀರ ಕುಸ್ತಿ ಪಂದ್ಯಾವಳಿ 57ರಿಂದ 65 ಕೆಜಿ, 66 ರಿಂದ 74 ಕೆಜಿ, 75ರಿಂದ 85 ಕೆಜಿ, 86 ಮೇಲ್ಪಟ್ಟು, ಕುಸ್ತಿ ಪಂದ್ಯಾವಳಿಗಳನ್ನು ಸಂಘಟಿಸಲಾಗುವುದು. ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ 50 ಕೆಜಿ, 51 ರಿಂದ 54 ಕೆಜಿ, 55 ರಿಂದ 57 ಕೆಜಿ, 58 ಕೆಜಿ ಮೇಲ್ಪಟ್ಟು ಕುಸ್ತಿ ಪಂದ್ಯಾವಳಿಯನ್ನು ಸಂಘಟಿಸಲಾಗುವುದು. ಜಿಲ್ಲಾ ಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಯು 57ರಿಂದ 65 ಕೆಜಿ, 66 ರಿಂದ 74 ಕೆಜಿ, 75 ರಿಂದ 85 ಕೆಜಿ, 86 ಕೆಜಿ ಮೇಲ್ಪಟ್ಟು ಕುಸ್ತಿ ಪಂದ್ಯಾವಳಿಯನ್ನು ಸಂಘಟಿಸಲಾಗುವುದು. ಜಿಲ್ಲಾ ಮಟ್ಟದಚಿತ್ ಕುಸ್ತಿಯಲ್ಲಿ ಭಾಗವಹಿಸುವ ಕುಸ್ತಿ ಪಟುಗಳು ಜಿಲ್ಲೆಯವರೇ ಆಗಿರಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್ತರಬೇಕು.ರಾಜ್ಯ ಮಟ್ಟದ ಕುಸ್ತಿಗಳು ಅಂಕಗಳ ಆಧಾರದ ಮೇಲೆ ನಡೆಯಲಿವೆ. ರಾಜ್ಯ ಮಟ್ಟದ ಪುರುಷÀ, ಮಹಿಳೆ ಕುಸ್ತಿಯಲ್ಲಿ ನಾಲ್ಕು ತೂಕದ ವಿಭಾಗದ ವಿಜೇತರಿಗೆ ಹಂಪಿ ಕಿಶೋರ, ಹಂಪಿ ಕಿಶೋರಿ, ಹಂಪಿ ಕುಮಾರ, ಹಂಪಿ ಕುಮಾರಿ, ಹಂಪಿ ಕೇಸರಿ, ಹಂಪಿ ಕಂಠೀರವ, ಹಂಪಿ ಮಹಿಳಾ ಕಂಠೀರವ ಪ್ರಶಸ್ತಿಯನ್ನು ನೀಡಲಾಗುವುದು. ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಸಕ್ತ ಕುಸ್ತಿಪಟುಗಳು ಮಾ.01 ರಂದು ಬೆ.8 ಗಂಟೆಯಿAದ 10 ಗಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಆಧಾರ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್‌ಜೆರಾಕ್ಸ್ ಪ್ರತಿಯೊಂದಿಗೆ ನೊಂದಾಯಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗೆ ಮೊ.9164693882, 9740110210 ಸಂಪರ್ಕಿಸಬಹುದು. ಬAಡಿಗಾಲಿ ತೊಡಿಸುವ ಸ್ಪರ್ಧೆ: ಗ್ರಾಮೀಣ ಕ್ರೀಡೆಯಾದ ಬಂಡಿಗಾಲಿ ತೊಡಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರು ವಿಜಯನಗರಜಿಲ್ಲೆಯ ನಿವಾಸಿಯಾಗಿರಬೇಕು. ಸಮಯದ ಅಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ನೀಡಲಾಗುವುದು. ಬಂಡಿಯ ಗಾಲಿಗಳನ್ನು ಹೊರತೆಗೆದು ಪುನಃ ಜೋಡಿಸಬೇಕು. ಸ್ಪರ್ಧೆಯಲ್ಲಿ ನಿರ್ಣಾಯಕರ ತೀರ್ಪು ಅಂತಿಮವಾಗಿರುತ್ತದೆ. ಭಾಗವಹಿಸುವ ಸ್ಪರ್ಧಾಳುಗಳು ಹೊಸ ಮಲಪನಗುಡಿ ಗ್ರಾಮದ ವಿಜಯವಿದ್ಯಾರಣ್ಯ ಪ್ರೌಢಶಾಲೆ ಮೈದಾನದಲ್ಲಿ ಮಾ.01 ರಂದು ಬೆ.8 ಗಂಟೆಯಿAದ ಬೆ.10 ಗಂಟೆಯೊಳಗೆ ಕಡ್ಡಾಯವಾಗಿ ಅಧಾರಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ.9986611992, 9036860314 ಸಂಪರ್ಕಿಬಹದು. ಗುಂಡುಎತ್ತುವ ಸ್ಪರ್ಧೆ : ಸ್ಪರ್ಧೆಯಲ್ಲಿ 174 ಕೆಜಿ, 155 ಕೆಜಿ, 135 ಕೆಜಿ ಮೂರು ವಿಭಾಗದಲ್ಲಿ ಕ್ರೀಡೆ ಆಯೋಜಿಸಲಾಗುತ್ತದೆ. ಆಸಕ್ತರು ಮೊ.8867784723, 9731444780 ಸಂಪರ್ಕಿಸಲುಕೋರಲಾಗಿದೆ.

ವಸ್ತು ಪ್ರದರ್ಶನ ಮಳಿಗೆಗೆ ಅರ್ಜಿ

ಹಂಪಿ ಉತ್ಸವದಲ್ಲಿ ಫೆ.28 ಮತ್ತು ಮಾ.01, 02 ರಂದು ನಡೆಯಲಿರುವ ಹಿನ್ನಲೆಯಲ್ಲಿ ವಿವಿಧ ಮಳಿಗೆಗಳನ್ನು ಸಿದ್ದಪಡಿಸಿ ವಸ್ತು ಪ್ರದರ್ಶನಕ್ಕಾಗಿ ವ್ಯವಸ್ಥೆಯನ್ನು ಮಾಡಲಾಗಿದೆ. ಮಳಿಗೆ ಕಾಯ್ದಿರಿಸಲು ಅರ್ಜಿಆಹ್ವಾನಿಸಲಾಗಿದೆ ಎಂದು ಹಂಪಿ ಉತ್ಸವದ ವಸ್ತು ಪ್ರದರ್ಶನ ಉಪ ಸಮಿತಿ ಅಧ್ಯಕ್ಷ ಬಿ.ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ಹಂಪಿ ಉತ್ಸವದಲ್ಲಿ 10*10 ಅಡಿ ಅಳತೆಯ ಮಳಿಗೆಗಳನ್ನು ವಸ್ತು ಪ್ರದರ್ಶನಕ್ಕಾಗಿ ಮುಂಗಡವಾಗಿಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಅನಿಲ ಕುಮಾರ್ ಮೊ.9449135765 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net