ಹಂಪಿಗೆ ಹರಿದು ಬರುತ್ತಿದೆ ಜನಸಾಗರ

HAMPI
ಹಂಪಿ ವಿಜಯವಿಠಲದ ದೇಗುಲದಲ್ಲಿ ಕಲ್ಲಿನ ರಥ ವೀಕ್ಷಣೆ ಮಾಡುತ್ತಿರುವ ಪ್ರವಾಸಿಗರು.
Published on

ಹೊಸಪೇಟೆ: ರಾಜ್ಯದ ಬಹುತೇಕ ಕಡೆ ಮಳೆ ಹೆಚ್ಚಾಗಿರುವುದರಿಂದ ಬಿಸಲಿನ ತಾಪ ಕಡಿಮೆಯಾಗಿದ್ದು, ವಾತವರಣ ತಂಪಾಗಿದೆ. ಹೀಗಾಗಿ ವಿಶ್ವವಿಖ್ಯಾತ ಹಂಪಿ ನೋಡಲು ಸಹ ಪ್ರವಾಸಿಗರು ಹರಿದು ಬರುತ್ತಿದ್ದಾರೆ.

ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣ ಬಹುತೇಕರು ಮಳೆಗಾಲದಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಪರಿಸರ ಹಚ್ಚ ಹಸಿರಾಗಿರುತ್ತದೆ. ಫೋಟೋಗ್ರಫಿಗೆ ಹೇಳಿ ಮಾಡಿಸಿದ ಸಮಯ ಇದಾಗಿರುತ್ತದೆ. ವಾರಾಂತ್ಯಕ್ಕೆ ಪ್ರವಾಸಿಗರ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಹಂಪಿಗೆ ಹೊಂದಿಕೊAಡAತೆ ತುಂಗಭದ್ರಾ ನದಿ ಹರಿಯುತ್ತದೆ. ಹೆಚ್ಚಿನ ಮಳೆ ಸುರಿದರೂ ನೀರು ನಿಲ್ಲುವುದಿಲ್ಲ. ಇದನ್ನರಿತು ಪ್ರವಾಸಿಗರು, ಹಂಪಿ ಪ್ರವಾಸಕ್ಕೆ ಸುರಕ್ಷಿತ ಎಂದು ಭಾವಿಸಿ ತಂಪು ವಾತವರಣಕ್ಕೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.

ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿರುವುದರಿAದ ಎಲ್ಲ ಸ್ಮಾರಕಗಳಲ್ಲಿ ಶನಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ಕಮಲ ಮಹಲ್, ಆನೆ ಸಾಲು ಮಂಟಪ, ಮಹಾನವಮಿ ದಿಬ್ಬದ ಬಳಿ ಹೆಚ್ಚಿನ ಪ್ರವಾಸಿಗರು ಇದ್ದರು. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಕೆಲವೊಮ್ಮೆ ಬಂದ ತುಂತುರು ಮಳೆಯಲ್ಲೇ ಐತಿಹಾಸಿಕ ತಾಣಗಳನ್ನು ಕಣ್ತುಂಬಿಕೊಂಡರು.

ವ್ಯಾಪರ ವಹಿವಾಟು ಚೇತರಿಗೆ

ಕಳೆದ ಫೆಬ್ರವರಿಯಿಂದ ಮೂರು ತಿಂಗಳ ಕಾಲ ಬಿಸಿಲಿನ ತಾಪಕ್ಕೆ ಹಂಪಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಇದರಿಂದ ಪ್ರವಾಸಿ ಮಾರ್ಗದರ್ಶಿಗಳು ಸೇರಿದಂತೆ ಹಂಪಿಯಲ್ಲಿನ ಸಣ್ಣಪುಟ್ಟ ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಕಂಗಾಲಾಗಿದ್ದರು. ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಸ್ಮಾರಕಗಳನ್ನು ನೋಡಲು ಉತ್ತಮ ವಾತಾವರಣ ನಿರ್ಮಾಣವಾಗಿದೆ. ಪ್ರವಾಸಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಿದ್ದು ಹಂಪಿ ಪರಿಸರದ ವ್ಯಾಪಾರಸ್ಥರಲ್ಲಿ ಮಂದಹಾಸ ಮೂಡಿದೆ.

ಆರು ಗಂಟೆಗೆ ಬಿಗ ತೆರಯಲಿ

ಈ ಭಾಗದಲ್ಲಿ ಬಿಸಿಲು ಜಾಸ್ತಿನೆ. ಬೇಸಿಗೆ ಎಲ್ಲಂತೂ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಇರುತ್ತದೆ. 30 ರಿಂದ 35 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದ್ದರಿಂದ ಪ್ರವಾಸಿಗರು ಬೆಳಗ್ಗೆ ಹಾಗೂ ಸಂಜೆ ವೇಳೆ ಹಂಪಿಯನ್ನು ಹೆಚ್ಚಾಗಿ ನೋಡುತ್ತಾರೆ. ಆದರೆ ಈ ವೇಳೆ ಕಡಲೆಕಾಳು ಗಣಪತಿ ರಾಣಿ ಸ್ನಾನಗೃಹ ಸೇರಿದಂತೆ ಕೆಲ ಸ್ಮಾರಕಗಳನ್ನು 8 ಗಂಟೆಯಾದರೂ, ಬೀಗ ತೆಗಿಯಲ್ಲ. ಆದ್ದರಿಂದ ಪ್ರವಾಸಿಗಳು ಬೆಳಿಗ್ಗೆ 6ಗಂಟೆಗೆಲ್ಲ ತೆರಯಬೇಕು ಎಂಬುದು ಪ್ರವಾಸಿಗರ ಒತ್ತಯವಾಗಿದೆ.

ಹತ್ತು ಸಾವಿರ ಭಕ್ತರು

ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ವಾತಾವರಣ ತಂಪಾಗಿದೆ. ಆದ್ದರಿಂದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿದೆ ಜತೆಗೆ ಭಕ್ತರು ಕೂಡ ಹೆಚ್ಚಾಗಿದ್ದಾರೆ. ದಕ್ಷಿಣ ಕಾಶಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಶನಿವಾರ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ದರ್ಶನ ಪಡೆದಿದ್ದಾರೆ. ಕೋದಂಡರಾಮ ದೇವಸ್ಥಾನ, ಯಂತ್ರೋದ್ಧಾರಕ ಆಂಜನೇಯ ಸ್ವಾಮಿ, ಉದ್ದನ ವೀರಭದ್ರ ದೇವಸ್ಥಾನ, ಮಾಲ್ಯವಂತ ರಘುನಾಥ ದೇವಾಲಯ, ಏಳು ಹೆಡೆ ನಾಗಪ್ಪ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಮಳೆಗಾಲದಲ್ಲಿ ಹಂಪಿ ಪರಿಸರ ನೋಡಲು  ಹೇಳಿ ಮಾಡಿಸಿದಂತಿರುತ್ತದೆ. ಈ ಭಾಗದಲ್ಲಿ ಬಿಸಲು ಹೆಚ್ಚಿರುವುದರಿಂದ ಪ್ರವಾಸಿಗರು ಬೆಳಗ್ಗೆ 10 ಗಂಟೆಗೆಲ್ಲ ಕೆಲ ಸ್ಮಾರಕ ನೋಡಿಕೊಂಡು ಹೋಗಿ ಸಂಜೆ ಮತ್ತೆ ಬರುತ್ತಾರೆ. ಆದ್ದರಿಂದ ಪ್ರವಾಸಿಗರ ಅನುಕೂಲಕ್ಕಾಗಿ ಆದಷ್ಟು ಬೇಗ ಸ್ಮಾರಕಗಳ ಗೇಟ್ ಬಿಗ ತೆರೆಯಬೇಕು. ಪ್ರವಾಸಿಗರ ಹೆಚ್ಚಳದಿಂದ ವ್ಯಾಪಾರ ವಹಿವಾಟು ಚೇತರಿಕೆ ಕಂಡಿದೆ. ವಿ.ವಿರೂಪಾಕ್ಷಿ, ಪ್ರವಾಸಿ ಮಾರ್ಗದರ್ಶಿ, ಹಂಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net