

ಹೊಸಪೇಟೆ: ಹಂಪಿ ಶ್ರೀರಘುನಂದನ ತೀರ್ಥರ ಸನ್ನಿಧಿಯಲ್ಲಿ ಪೂರ್ವಾರಾಧನೆ ನಿಮಿತ್ತ ಬೃಂದಾವನಕ್ಕೆ ಶುಕ್ರವಾರ ಫಲ ಪಂಚಾಮೃತಾಭಿಷೇಕ ಜರುಗಿತು.
ಪೂರ್ವಾರಾಧನೆ ನಿಮಿತ್ತ ಅಷ್ಟೋತ್ತರ, ಭಜನೆ, ಉಪನ್ಯಾಸ ಹಾಗೂ ಸಂಜೆ ದೀಪೋತ್ಸವ, ಸ್ವಸ್ತಿವಾಚನ, ಮಹಾಮಂಗಳರಾತಿ ನಡೆಯಿತು. ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಶ್ರೀಮಠದ ಮಠಾಧಿಕಾರಿ ಎಚ್.ಪವನಾಚಾರ್ಯ ಮಾತನಾಡಿ, ಹಂಪಿಯ ಶ್ರೀರಘುನಂದನ ತೀರ್ಥರ ಮೂಲಬೃಂದಾವನ ಸನ್ನಿಧಿಯಲ್ಲಿ ನ.23 ರಂದು ಮಂತ್ರಾಲಯ ಮಠಧೀಶರಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಘನಾಧ್ಯಕ್ಷತೆಯಲ್ಲಿ ಮಧ್ಯಾರಾಧನೆ ನಿಮಿತ್ತ ಶತಕಂಠಗಾನ ಕಾರ್ಯಕ್ರಮ ನಡೆಯಲಿದೆ. ಶ್ರೀಗಳ ಆದೇಶದಂತೆ ನ.24 ರವರೆಗೆ ಆರಾಧನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ನ.23 ರಂದು ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ ಫಲ ಪಂಚಾಮೃತಾಭಿಷೇಕ ಜರುಗಲಿದೆ. ನಂತರ ರಜತ, ರೇಷ್ಮೆ ವಸ್ತ್ರ ಹಾಗೂ ವಿವಿಧ ಹೂವುಗಳಿಂದ ಅಲಂಕಾರ ನಡೆಯಲಿದೆ. ಬಳಿಕ ಶ್ರೀಗಳ ಘನಾಧ್ಯಕ್ಷತೆಯಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಿದ ಶ್ರೀಮೂಲರಾಮದೇವರ ಹಾಡುಗಳ ಝೇಂಕಾರ, ಶತಕಂಠ ಗಾನ ಕಾರ್ಯಕ್ರಮ ನೂರಾರು ಭಜನಾ ಮಂಡಲಿ ಸದಸ್ಯರಿಂದ ಚತುರ್ಯುಗ ಬ್ರಹ್ಮಕರಾರ್ಚಿತ ಶ್ರೀ ಮೂಲರಾಮದೇವರ ಪದಗಳ ಸಾಮೂಹಿಕ ಪಾರಾಯಣ ನಡೆಯಲಿದೆ ಎಂದರು.
ಬೆಳಿಗ್ಗೆ 8ಕ್ಕೆ ಸುಪ್ರಭಾತ, 9ಕ್ಕೆ ಭಜನಮಂಡಳಿಯಿAದ ಭಜನೆ ಕಾರ್ಯಕ್ರಮ ಹಾಗೂ ಬೆಳಗ್ಗೆ 10ಕ್ಕೆ ಬ್ರಹ್ಮಕರಾರ್ಚಿತ ಶ್ರೀಮೂಲರಾಮದೇವರ ಚಿಂತನೆ ನಡೆಯಲಿದೆ. ನಂತರ ಅಪರೋಕ್ಷಜ್ಞಾನಿಗಳಿಂದ ರಚಿತವಾದ ಆಯ್ಕೆಯಾದ ಶ್ರೀಮೂಲರಾಮದೇವರ ಹಾಡುಗಳ ಸಾಮೂಹಿಕ ಪಾರಾಯಣ ಜರುಗಲಿದೆ. ಬಳಿಕ ಪರಮಪೂಜ್ಯ ಶ್ರೀಪಾದಂಗಳವರಿAದ ಅನುಗ್ರಹ ಸಂದೇಶ ನಂತರ ಸಂಸ್ಥಾನ ಪೂಜೆ ಜರುಗಲಿದೆ ಎಂದರು.
ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಅರ್ಚಕ ನರಸಿಂಹ ಆಚಾರ್ಯ, ಪ್ರಮುಖರಾದ ಭೀಮಸೇನಾಚಾರ್ಯ, ಟೀಕಾಚಾರ್ಯ, ಶ್ರೀನಿವಾಸ ಸಂಪ್ರತಿ, ಎಚ್.ಪಿ.ಸಮೀರಾ, ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.
22 ಮಂಜು 02
ಹಂಪಿಯ ಶ್ರೀರಘುನಂದನ ತೀರ್ಥರ ಬೃಂದಾವನ ವಿಶೇಷ ಅಲಂಕಾರ ಮಾಡಲಾಯಿತು.