ಹಂಪಿಗೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಸಿಂಘೆ ಭೇಟಿ

27 MANJU 03
Published on

ಹೊಸಪೇಟೆ: ಶ್ರೀಲಂಕಾದ ಮಾಜಿ ಅಧ್ಯಕ್ಷ ರನೀಲ್ ವಿಕ್ರಂ ಸಿಂಘೆ ಅವರು ಕುಟುಂಬದೊAದಿಗೆ ವಿಶ್ವವಿಖ್ಯಾತ ಹಂಪಿಗೆ ಬುಧವಾರ ಭೇಟಿ ನೀಡಿದರು.

ಬೆಳಗ್ಗೆ ವಿರೂಪಾಕ್ಷೇಶ್ವರ ದೇಗುಲಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಲಕ್ಷ್ಮಿ ಆನೆಯು ಸ್ವಾಗತ ಮಾಡಿತು. ಬಳಿಕ ಅವರು ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಉಗ್ರನರಸಿಂಹ, ಕಮಲ್‌ಮಹಾಲ್, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ವಿಜಯವಿಠಲ ದೇಗುಲ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.

ಬಳಿಕ ಅವರು ಮಾತನಾಡಿ, ಹಂಪಿಯ ಸ್ಮಾರಕಗಳು ನೋಡಲು ಅತ್ಯದ್ಭುತವಾಗಿವೆ. ಭಾರತಕ್ಕೆ ಹಂಪಿ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನದ ವರೆಗೆ ಹಂಪಿ ವೀಕ್ಷಿಸಿ ಪ್ರಯಾಣ ಬೆಳೆಸಿದರು.

ಪ್ರವಾಸಿ ಮಾರ್ಗದರ್ಶಿ ವಿ.ಗೋಪಾಲ್ ಹಂಪಿಯ ಇತಿಹಾಸದ ಮಾರ್ಗದರ್ಶನ ನೀಡಿದರು. ಅವರಿಗೆ ಹಂಪಿ ಪೊಲೀಸರು ಭದ್ರತೆ ಒದಗಿಸಿದರು. ಪ್ರವಾಸೋದ್ಯಮ ಇಲಾಖೆಯ ಸ್ಥಾನಿಧಿಕಾರಿಗಳಾದ ಹರೀಶ್, ಸಾಗರ್, ಪೊಲೀಸ್ ಇಲಾಖೆಯ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net