ಹಂಪಿಯಲ್ಲಿ ಮನಸೂರೆಗೊಂಡ ವಿಂಟೇಜ್ ಕಾರುಗಳು

16 MANJU 01
Published on

ಹೊಸಪೇಟೆ: ‘ವಿಂಟೇಜ್’ ವಾಹನಗಳ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸಲುವಾಗಿ ಬೆಂಗಳೂರಿನಿAದ ಹೊರಟ ಕಾರುಗಳು ಹಂಪಿಯ ಪರಿಸರದಲ್ಲಿ ಶನಿವಾರ ಜನರ ಮನಸೂರೆಗೊಂಡವು.

ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ (ಎಫ್‌ಎಚ್‌ವಿಐ) ಸಂಘಟನೆಯು ಬೆಲ್ಜಿಯಂ ಮೂಲದ ಡೆಸ್ಟಿನೇಷನ್ ರ‍್ಯಾಲಿ ಸಂಸ್ಥೆಯ ಜತೆ ಈ ವಿಂಟೇಜ್ ಕಾರುಗಳ ಪ್ರವಾಸ ಹಮ್ಮಿಕೊಂಡಿದೆ. ದೇಶದಾದ್ಯಂತ ಓಡಾಡುತ್ತಿರುವ 20 ಕಾರುಗಳು ಹಾಗೂ ಜಗತ್ತಿನಾದ್ಯಂತ ಓಡಾಡುತ್ತಿರುವ ಇನ್ನೂ 20 ಕಾರುಗಳು ಸೇರಿ ಒಟ್ಟು 40 ಕಾರುಗಳ ಪ್ರವಾಸ ಹಂಪಿಯಲ್ಲಿ ಸಮಾಗಮಗೊಡಿವೆ. ಮುಂದೆ ಇವುಗಳು ಚಿಕ್ಕಮಗಳೂರು, ಕೊಡಗು, ಮೈಸೂರು ಮೂಲಕ ಬೆಂಗಳೂರಿಗೆ ಇದೇ ನ.21ರಂದು ವಾಪಸಾಗಲಿವೆ.

ಇಟಲಿ, ದಕ್ಷಿಣ ಆಫ್ರಿಕಾ, ಲಿಥುವಾನಿಯಾ, ಪೋರ್ಚುಗಲ್, ಐರ್‌ಲೆಂಡ್, ಜರ್ಮನಿ, ಬೆಲ್ಜಿಯಂ, ಫಿನ್ಲೆಂಡ್, ಅಮೆರಿಕ, ನೆದರ್ಲೆಂಡ್, ಬ್ರಿಟನ್, ಆಸ್ಟ್ರೇಲಿಯಾಗಳ 20 ಕಾರುಗಳು ಗೋವಾಕ್ಕೆ ಹಡಗಿನಲ್ಲಿ ಬಂದಿದ್ದು, ಹುಬ್ಬಳ್ಳಿ ಮೂಲಕ ಇಲ್ಲಿನ ಇವಾಲ್ವ್ ಬ್ಯಾಕ್ ರೆಸಾರ್ಟ್ನಲ್ಲಿ ಬಂದಿಳಿದಿವೆ. ಅಲ್ಲಿ ಎರಡೂ ತಂಡಗಳು ಸಮಾಗಮಗೊಂಡು ಭಾನುವಾರ ಬೆಳಿಗ್ಗೆ ಚಿಕ್ಕಮಗಳೂರಿನತ್ತ ತೆರಳಲಿದ್ದೇವೆ. ವಿಶ್ವ ಪಾರಂಪರಿಕ ತಾಣಗಳಿಗೆ ವಿಂಟೇಜ್ ಕಾರುಗಳನ್ನು ತಂದು ಎರಡೂ ಪರಂಪರೆಗಳನ್ನು ಉಳಿಸುವ ಸಂದೇಶ ಸಾರುವುದೇ ನಮ್ಮ ಪ್ರವಾಸದ ಉದ್ದೇಶ ಎಂದು ಎಫ್‌ಎಚ್‌ವಿಐ ಅಧ್ಯಕ್ಷ ಡಾ.ರವಿಪ್ರಕಾಶ್ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ಭಾರತದ 20 ವಿಂಟೇಜ್ ಕಾರುಗಳ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಕಾರುಗಳು ಸಂಜೆ ಹೊಸಪೇಟೆ ತಲುಪಿದ್ದವು. ಹೊಸಪೇಟೆಯ ರಾಯಲ್ ಆರ್ಕಿಡ್ ಹೋಟೆಲ್ ಅವರಣದಲ್ಲಿ ಈ ಶತಮಾನದ ಸುಂದರಿಯರು ಬೆರಗು ಬಿನ್ನಾಣದಿಂದ ನಿಂತಿದ್ದವು.

ಯಾವ ಕಾರುಗಳು?

1926ರ ಬೆಂಟ್ಲಿ ಟೂರರ್, 1933ರ ಆಲ್ವಿಸ್ ಸ್ಪೀಡ್, 1939ರ ಷೆವರ್ಲೆ ಮಾಸ್ಟರ್ ಡಿಲಕ್ಸ್ ಲಿಮೊಸಿನ್, 1947ರ ಸಿಟ್ರೊಯಿನ್ ಟ್ರ‍್ಯಾಕ್ಷನ್, ಷೆವರ್ಲೆ ಫ್ಲೀಟ್ ಮಾಸ್ಟರ್, 1950ರ ಎಂಜಿ ವೈಟಿ, 1952ರ ಬೆಂಟ್ಲಿ ಎಂಕೆ ಗಿI, 1955ರ ಲ್ಯಾಂಡ್ ರೋವರ್ ಸೀರೀಸ್ 1, 1956ರ ಡಾಡ್ಜ್ ಸಬ್‌ಅರ್ಬನ್ ಕಸ್ಟಮ್, 1962ರ ಜಾಗ್ವಾರ್ ಎಂಕೆ ವಿಐ, 1967ರ ಟ್ರಯಂಫ್ ಜಿಟಿ6, 1968ರ ಮರ್ಸಿಡಿಸ್ ಪಗೋಡೆ 280 ಎಸ್‌ಎಲ್, 1969ರ ಅಲ್ಫಾ ರೋಮಿಯೊ ಸ್ಪೈಡರ್, 1970ರ ಮರ್ಸಿಡೆಸ್ 280 ಎಸ್‌ಎಲ್, 1971ರ ವೋಕ್ಸ್ವ್ಯಾಗನ್ ಮೈಕ್ರೊಬಸ್, 1972ರ ಪೋರ್ಷೆ 911, 1974ರ ಜಾಗ್ವಾರ್ ಇ–ಟೈಪ್ ಗಿ12, 1975ರ ಲ್ಯಾನ್ಸಿಯಾ, 1980ರ ಕಾರ್ವೆಟ್ಟೆ ಸ್ಟಿಂಗ್‌ರೇ ಕಾರುಗಳ ಭವ್ಯ ನೋಟ ವಿಶಿಷ್ಟವಾಗಿ ಕಂಡು ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net