

ಹೊಸಪೇಟೆ: ಹಂಪಿಯಲ್ಲಿ ಡಿವೈಎಸ್ಪಿ ಉಪವಿಭಾಗದ ಕಚೇರಿ ಪುನರ್ ಸ್ಥಾಪಿಸುವಂತೆ ಫೇಸ್ ಬುಕ್ ಪೇಜ್ ನಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.
ಕೊಪ್ಪಳದ ಗಂಗಾವತಿಯ ಸಣಾಪುರದಲ್ಲಿ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಹಂಪಿಯಲ್ಲಿ ಈ ಹಿಂದೆ ಡಿವೈಎಸ್ಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಹಂಪಿಗೆ ಬರುವ ಪ್ರವಾಸಿಗರು ಮತ್ತು ಜನರ ಸುರಕ್ಷತೆಗೆ ಮಾಡಲಾಗಿದ್ದನ್ನು ಈಗ ಸ್ಥಳಾಂತರ ಮಾಡಲಾಗಿದೆ. ಹಂಪಿ, ಆನೆಗುಂದಿಗೆ ದೇಶ-ವಿದೇಶಿ ಪ್ರವಾಸಿಗಳು ಭೇಟಿ ನೀಡುತ್ತಾರೆ. ಅವರ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧತೆ ತೋರಲಿ. ನಾನು ಅಖಂಡ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ಡಿವೈಎಸ್ಪಿ ದರ್ಜೆಯ ಅಧಿಕಾರಿ ನೇಮಕ ಮಾಡಿದ್ದೆ. ಉತ್ತಮ ವಾಹನ ವ್ಯವಸ್ಥೆ ಕಲ್ಪಿಸಿದ್ದೆ. ಯಡಿಯೂರಪ್ಪ ಸರ್ಕಾರದಲ್ಲಿ ಉತ್ತಮ ವಾಹನಗಳನ್ನು ಕೊಟ್ಟಿದ್ದರು. ಈಗ ಸಬ್ ಡಿವಿಜನ್ ತೆಗೆದಿರೋದು ಸರಿಯಲ್ಲಾ. ಈ ಕೂಡಲೇ ಡಿವೈಎಸ್ಪಿ ದರ್ಜೆಯ ಕಚೇರಿ ಪ್ರಾರಂಭಿಸಿ, ಪ್ರವಾಸಿಗರ ಸುರಕ್ಷತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.