

ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ ಕಮಲಾಪುರ-ಬಿ ವಲಯದ ಹಂಪಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ರಾಷ್ಟ್ರೀಯ ಪೋಷಣ ಅಭಿಯಾನದ ಅಡಿ ಪೋಷಣ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಸಿಡಿಪಿಒ ಸಿಂಧೂ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಪೋಷಣ ಅಭಿಯಾನದ ಅಡಿ ಪೋಷಣ ಮಾಸಾಚರಣೆ ಮಾಡಲಾಗುತ್ತಿದೆ. ಇದರ ಪ್ರಮುಖ ಉದ್ದೇಶ ಅಂಗನವಾಡಿ ಕೇಂದ್ರದ ಫಲಾನುಭವಿಗಾಳದ ಗರ್ಭಿಣಿಯರು, ಭಾಣಂತಿಯರ ಆರೋಗ್ಯದ ಕಾಳಜಿ ವಹಿಸುವುದಾಗಿದೆ ಎಂದು ಹೇಳಿದರು.
ಹಂಪಿ ಆಯೂಷ್ ವೈದ್ಯಾಧಿಕಾರಿ ಶ್ರೀಪ್ರಸಾದಬಾಬು ಮಾತನಾಡಿ, ದೇಹದ ಆರೋಗ್ಯ ಯಾವರೀತಿಯಲ್ಲಿ ಕಾಪಾಡಿಕೊಳ್ಳಬೇಕು, ಮಕ್ಕಳಿಗೆ ಹಾಗೂ ಗರ್ಭಿಣಿಯರು ಆಹಾರ ರೀತಿ ಹೇಗಿರಬೇಕು ಎಂದರು. ಹAಪಿ ಅಂಗನವಾಡಿ ವ್ಯಾಪ್ತಿಯ ಗರ್ಭಿಣಿಯರಿಗೆ ಇದೇ ವೇಳೆ ಸೀಮಂತ ಕಾರ್ಯಕ್ರಮ ನಡೆಯಿತು. ಹಂಪಿ ಗ್ರಾ.ಪಂ.ಅಧ್ಯಕ್ಷ ರಚನಿ, ಪಿಡಿಓ ಗಂಗಾಧರ, ವಲಯದ ಮೇಲ್ವಿಚಾರಕಿ ಎಲ್.ಡಿ.ನಧಾಫ್ ಇತರರಿದ್ದರು.