ಹಂಪಿಗೆ ನಟಿ ರಚಿತಾ ರಾಮ್

29 MANJU 06
Published on

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಬುಧವಾರ ಸಚಿವ ಜಮೀರ್​ ಪುತ್ರ ಝೈದ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಕಲ್ಟ್ ಸಿನಿಮಾ ಚಿತ್ರಕರಣ ಭರದಿಂದ ಸಾಗಿದೆ‌.

ಬುಧವಾರ ಬೆಳಗ್ಗೆಯಿಂದ ಶ್ರೀ ವಿರೂಪಾಕ್ಷೇಶ್ವರ ದೇಗುಲ ಹಾಗೂ ತುಂಗಭದ್ರಾ ನದಿ ತೀರದಲ್ಲಿ ಚಿತ್ರೀಕರಣ ನಡೆದಿದೆ. ಇನ್ನೂ ನಾಲ್ಕು ದಿನಗಳ ಕಾಲ ಹಂಪಿಯ ವಿವಿಧ ಕಡೆ ಚಿತ್ರೀಕರಣ ನಡೆಯಲಿದೆ. ಹಂಪಿಯಲ್ಲಿ ಆಗಮಿಸಿದ ನಟಿ ರಚಿತಾ ರಾಮ್ ನೋಡಲು ಅಭಿಮಾನಿಗಳು ಮುಗಿಬಿದ್ದರು. ಪೊಲೀಸ್ ಬಂದೋಬಸ್ ನಲ್ಲಿ ಚಿತ್ರೀಕರಣ ನಡೆಯಿತು.

ಹಂಪಿಗೆ ಚಿತ್ರನಟಿ ರಚಿತಾ ರಾಮ್ ಬರುತ್ತಿದ್ದಾರೆನ್ನುವಂತೆಯೇ ಜನ ಸೇರಿಬಿಟ್ಟಿದರು.ಅವರ ಅಭಿಮಾನಿಗಳು, ಚಿತ್ರನಟನನ್ನು ನೋಡಬೇಕೆನ್ನುವ ಕುತೂಹಲದಿಂದ ಸಾಕಷ್ಟು ಜನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಬಳಿ ಸೇರಿದ್ದರು. ನೆಚ್ಚಿನ ನಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ರಕ್ಷಣಾ ಸಿಬ್ಬಂದಿಗಳು ಅಭಿಮಾನಿಗಳಿಗೆ ನಿಯಂತ್ರಿಸಲು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net