

ಹೊಸಪೇಟೆ: ಶ್ರೀ ನರಹರಿ ತೀರ್ಥರ ಆರಾಧನಾ ಮಹೋತ್ಸವದ ನಿಮಿತ್ತ ಹಂಪಿಯ ನಡುಗಡ್ಡೆಯಲ್ಲಿ ಸೋಮವಾರ ಬೆಳಗ್ಗೆಯಿಂದ ರಾಯರ ಮಠದಿಂದ ಹಾಗೂ ಮಧ್ಯಾಹ್ನದಿಂದ ಉತ್ತಾರಾಧಿ ಮಠದಿಂದ ಪೂರ್ವಾರಾಧನೆ ಪೊಲೀಸ್ ಬಂದೋಬಸ್ತ್ ನಲ್ಲಿ ಜರುಗಿತು.
ಶ್ರೀ ನರಹರಿ ತೀರ್ಥರ ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ 4.30ಕ್ಕೆ ಗಂಟೆಯಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ನೂತನ ರೇಷ್ಮೆ ವಸ್ತ್ರಗಳ ಸಮರ್ಪಣೆ, ತಿಳಸಿ ಅರ್ಚನೆ, ಪುಷ್ಪಾರ್ಚನೆ, ಸೇರಿದಂತೆ ಇತರೆ ಅರ್ಚನೆಗಳು ನಡೆದವು. ಅಲಂಕಾರ ಬ್ರಾಹ್ಮಣ ಸಮಾರಧನೆ ನಡೆಯಿತು. ನಂತರ ಗುರುಗಳಿಗೆ ನೈವೇದ್ಯ ನಡೆಯಿತು. ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾಧ ಮಾಡಿದರು. ಮಧ್ಯಾಹ್ನದ ನಂತರ ಉತ್ತರಾಧಿಮಠದಿಂದ ಮೂಲ ಶ್ರೀರಾಮ ದೇವರ ಪೂಜೆ. ಯತಿಗಳಿಗೆ ನೈವೇದ್ಯ ಹೊರತುಪಡಿಸಿ ಎಲ್ಲ ಪೂಜಾ ಕೈಕರ್ಯಗಳು ನಡೆದವು.
ಶ್ರೀ ನರಹರಿ ತೀರ್ಥರ ಪೂಜಾ ವಿಚಾರದಲ್ಲಿ ಕಳೆದ 24 ವರ್ಷಗಳಿಂದ ರಾಯರಮಠ ಹಾಗೂ ಉತ್ತರಾದಿ ಮಠದ ನಡೆವೆ ವಿವಾದ ನಡೆದಿದೆ. ರಾಯರ ಮಠಕ್ಕೆ ಹೊಸಪೇಟೆ ನ್ಯಾಯಾಲಯದಿಂದ ಹಾಕಿದ ನಿರ್ಬಂಧ ಉಚ್ಚನ್ಯಾಯಾಲಯ ಇತ್ತೀಚೆಗೆ ತೆರವು ಮಾಡಿ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಉತ್ತಾರಾಧಿಮಠದಿಂದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಯಥಾಸ್ಥಿತಿ ಕಾಪಾಡುವಂತೆ ತೀರ್ಪು ನೀಡಿದೆ. ಆದರೆ, ಯಥಾಸ್ಥಿತಿ ಎಂಬ ತೀರ್ಪು ಗೊಂದಲಮಯವಾಗಿದೆ. ಕಳೆದ ಎರಡು ದಿನಗಳಿಂದ ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಎರಡು ಮಠದ ಪ್ರಮುಖರೊಂದಿಗೆ ಸಭೆ ನಡೆಸಿದರು ಸಮಸ್ಯೆ ಬಗೆ ಹರಿದಿರಲಿಲ್ಲ. ಆದ್ದರಿಂದ ಬೆಳಗ್ಗೆ 4ರಿಂದ ಶ್ರೀ ನರಹರಿ ತೀರ್ಥರ ಪೂರ್ವಾರಾಧನೆ ರಾಯರಮಠದಿಂದ ನಡೆದಿದೆ. ಉತ್ತರಾಧಿ ಮಠದವರು ಮತ್ತೆ ಸೋಮವಾರ ಹೈಕೋರ್ಟ್ ಮೊರೆ ಹೋಗಿದ್ದರು. ಮಧ್ಯಾಹ್ನ ಮತ್ತೆ ಉತ್ತರಾಧಿಮಠದಿಂದ ಪರವಾಗಿ ತೀರ್ಪು ನೀಡಿದೆ. ಆದ್ದರಿಂದ ಮಧ್ಯಾಹ್ನದಿಂದ ಉತ್ತಾರಾಧಿ ಮಠದಿಂದ ಶ್ರೀ ನರಹರಿ ತೀರ್ಥರ ಪೂರ್ವಾರಾಧನೆ ನಡೆಯಿತು.
ಶ್ರೀ ನರಹರಿತೀರ್ಥ ಬೃಂದಾವನದಲ್ಲಿ ಎರಡು ಮಠಗಳ ಭಕ್ತಾದಿಗಳಿಂದ ಕೀ ವಿಚಾರವಾಗಿ ವಾಗ್ವಾದ ನಡೆಯಿತು. ಉತ್ತರಾಧಿ ಮಠ ಮತ್ತು ಮಂತ್ರಾಯ ಮಠದ ವ್ಯಾಜ್ಯ ವಿವಾದ ಆರಧಾನ ಮಹೋತ್ಸವ ನಿಮಿತ್ತ ಕೋರ್ಟ್ ಉತ್ತಾರಾಧಿಮಠದ ಪರವಾಗಿ ಮದ್ಯಂತರ ಆದೇಶ ನೀಡಿದೆ. ಮಧ್ಯಾಹ್ನಕ್ಕೆ ಪೊಲೀಸರು ರಾಯರಮಠದವರಿಗೆ ನಡುಗಡ್ಡಿಯಿಂದ ಕಳಿಸಿದರು. ಈ ವೇಳೆ ಬೃಂದಾವನಕ್ಕೆ ಕೀ ಹಸ್ತಾಂತರ ವಿಚಾರದಲ್ಲಿ ವಾಗ್ವಾದ ನಡೆಯಿತು. ಎರಡು ಮಠದ ಭಕ್ತರು ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಳ್ತುತ್ತಿದ್ದರು. ಉತ್ತಾರಾಧಿ ಮಠದ ಭಕ್ತರು ಕೀ ವಿಚಾರದಲ್ಲಿ ಪೊಲೀಸರ ಜತೆಗೂ ವಾಗ್ವಾದ ಮಾಡಿಕೊಂಡರು. ಕೆಲ ಸಮಯದ ನಂತರ ರಾಯರ ಮಠದ ಭಕ್ತರೊಬ್ಬರು ಬೃಂದಾವನದ ಕೀ ತೆಗೆದರು.
ನ್ಯಾಯಾಲಯದ ಆದೇಶದ ಪಾಲನೆ ಮಾಡುತ್ತೇವೆ. ಹಂಪಿಯ ನಡುಗಡ್ಡೆಯಲ್ಲಿ ನಡೆದ ಶ್ರೀ ನರಹರಿ ತೀರ್ಥರ ಆರಾಧನಾ ಮಹೋತ್ಸವದ ಭದ್ರತೆ ಒದಗಿಸಲಾಗಿತ್ತು. ಬೆಳಗ್ಗೆ ರಾಯರಮಠದಿಂದ ಆರಾಧನೆ ನಡೆದಿದೆ. ಮಧ್ಯಾಹ್ನನಂತರ ಉತ್ತರಾಧಿಮಠದಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಿವೆ. ಶಾಂತ ರೀತಿಯಲ್ಲಿ ಆರಾಧನೆ ನಡೆದಿದೆ. ಬಿ.ಎಲ್.ಶ್ರೀಹರಿಬಾಬು, ಎಸ್ಪಿ, ವಿಜಯನಗರ