

ಹೊಸಪೇಟೆ: ರಾಮಚರಿತಮಾನಸ್‌ನ ಪ್ರತಿಪಾದಕ ಮೊರಾರಿ ಬಾಪು ನೇತೃತ್ವದ ಐತಿಹಾಸಿಕ ರಾಮ ಯಾತ್ರೆಯ ಧಾರ್ಮಿಕ ಕ್ಷೇತ್ರ ಹಂಪಿ ಆಗಮಿಸಲಿದ್ದು, ಅ.29 ಮತ್ತು 30ರಂದು ಎರಡು ದಿನಗಳ ಕಾಲ ದೈವ ಭಕ್ತಿಯ ಪರಂಪರೆಯ ರಾಮ ಕಥಾ ನಿರೂಪಣೆ ನಡೆಯಲಿದೆ.
ಅ.05ರಂದು ಚಿತ್ರಕೂಟದಿಂದ ಪ್ರಾರಂಭವಾಗಿ ಸತ್ನಾ, ನಾಶಿಕ್ ಮಾರ್ಗವಾಗಿ ಸಾಗಿಬಂದ 11 ದಿನಗಳ ಈ ತೀರ್ಥಯಾತ್ರೆಯಲ್ಲಿ ಇದು ಐದನೇ ಪ್ರಮುಖ ನಿಲುಗಡೆಯಾಗಲಿದೆ. ಋಷ್ಯಮೂಕ ಪರ್ವತದಲ್ಲಿ ಅ.29 ಮತ್ತು 30ರಂದು ಪ್ರಶ್ರವಣ ಪರ್ವತದಲ್ಲಿ ಬೆಳಗ್ಗೆ 10 ಗಂಟೆಗೆ ಕಥಾ ನಡೆಯಲಿದೆ.
ಐತಿಹಾಸಿಕ ರಾಮ ಯಾತ್ರೆಯು ಶ್ರೀರಾಮಚಂದ್ರನ ವನವಾಸ, ಲಂಕೆಗೆ ಪಯಣ ಮತ್ತು ಅಯೋಧ್ಯೆಗೆ ಹಿಂದಿರುಗಿದ ಕುರುಹುಗಳನ್ನು ಸಾರುವ ಪವಿತ್ರ ಸ್ಥಳಗಳ ದಾರಿಯಲ್ಲಿ ಸಾಗುತ್ತಾ, ಭಾರತ ಮತ್ತು ಶ್ರೀಲಂಕಾದಾದ್ಯAತ 8000 ಕಿಲೋ ಮೀಟರ್‌ಗಳಿಗಿಂತ ಹೆಚ್ಚು ದೂರವನ್ನು 11 ದಿನಗಳಲ್ಲಿ ಕ್ರಮಿಸುತ್ತದೆ. ಬಾಪು ಮತ್ತು ಒಟ್ಟು 411 ಭಕ್ತರಿಗಾಗಿ 22 ಬೋಗಿಗಳ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಈ ರೈಲಿನಲ್ಲಿ ಬಾಪು ಅವರೊಂದಿಗೆ ಭಕ್ತರು ಪ್ರಯಾಣಿಸಲಿದ್ದಾರೆ. ಈ ಯಾತ್ರೆಯ ಉದ್ದಕ್ಕೂ ಭಾರತ ಮತ್ತು ಶ್ರೀಲಂಕಾದ ಪವಿತ್ರ ಸ್ಥಳಗಳಲ್ಲಿ ಒಟ್ಟು 9 ರಾಮಕಥಾಗಳನ್ನು ಆಯೋಜಿಸಲಾಗಿದೆ. ರಾಮಕಥಾ ಶ್ರವಣವು ಎಲ್ಲರಿಗೂ ಮುಕ್ತವಾಗಿದ್ದು, ಎಲ್ಲ ವರ್ಗಗಳ ಜನರು ಭಾಗವಹಿಸಬಹುದು. ಪ್ರವಚನಗಳು ಮತ್ತು ಭೋಜನ ವ್ಯವಸ್ಥೆಗಳೆರಡೂ ಸಂಪೂರ್ಣವಾಗಿ ಉಚಿತವಾಗಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.