ಉಗ್ರಗಾಮಿಗಳಿಗೆ ಕಠಿಣ ಶಿಕ್ಷೆಯಾಗಲಿ

27 MANJU 01
Published on

ಹೊಸಪೇಟೆ: ನಗರದ ಅಂಜುಮನ್ ಖಿದ್ಮತೆ ಇಸ್ಲಾಂನಿAದ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ಖಂಡಿಸಿ ಹಾಗೂ ಮೃತ ಪಟ್ಟ ನಾಗರೀಕರಿಗೆ ಮೆಣದ ಬತ್ತಿ ಹಚ್ಚುವ ಮೂಲಕ ಶದ್ರಾಂಜಲಿ ಸಲ್ಲಿಸಲಾಯಿತು.

ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ ನಿಯಾಜಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿಗಳ ಕೃತ್ಯವನ್ನು ಖಂಡಿಸುತ್ತೇವೆ. ಕೆಲವರು ಜಾತಿ ಧರ್ಮ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುತ್ತಾರೆ. ಹಿಂದೂ ಮುಸ್ಲಿಮರ ಸಾಮರಸ್ಯವನ್ನು ಹಾಳು ಮಾಡುತ್ತಿರುತ್ತಾರೆ. ಉಗ್ರಗಾಮಿಗಳಿಗೆ ಯಾವುದೇ ಜಾತಿ ಮತ ಪಂಥ ಭೇದಭಾವವಿಲ್ಲದೆ ದುಷ್ಕೃತ್ಯವನ್ನು ಎಸಗುತ್ತಿರುತ್ತಾರೆ. ಇಂತಹ ಉಗ್ರಗಾಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ವಖ್ಫ್ ಬೋರ್ಡ್ ಜಿಲ್ಲ ಅಧ್ಯಕ್ಷ ದಾದಾಪೀರ್ ಭಾವ್, ಪ್ರಮುಖರಾದ ನಾಜಿಮ್, ಫಜಲುಲ್ಲಾ, ರೆಹಮತ, ಎಮ್.ಎಮ್.ಫೈರೋಜ್ ಖಾನ್, ಅಬೂಬಕ್ಕರ್ ಅಶ್ರಫಿ, ಡಾ.ದರ್ವೇಶ್ ಮೈನುದ್ದಿನ್, ಗುಲಾಮ್ ರಸೂಲ್, ಖಾದರ್ ರಫಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net