

ಹೊಸಪೇಟೆ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯ ಬೀದಿಯಲ್ಲಿ ಮುತ್ತು, ರತ್ನ, ಚಿನ್ನವನ್ನು ಮಾರುತ್ತಿದ್ದ ಎಂದು ಇತಿಹಾಸ ಸಾರುತ್ತದೆ. ಇದು ನಮ್ಮ ಕರ್ನಾಟಕ ಮಾತ್ರಲ್ಲ ದೇಶದ ಹೆಮ್ಮೆಯಾಗಿದೆ. ಈ ವಿಶ್ವವಿಖ್ಯಾತ ಹಂಪಿಯ ರಾಜಬೀದಿಯಗಳಲ್ಲಿ ಸದ್ಯ ಮಕ್ಕಳ ಕಲರವದಿಂದ ಮೈದಳೆದಿದ್ದು, ಹಾದಿ ಬೀದಿಗಳಲ್ಲಿ ಮಕ್ಕಳ ಓಡಾಟದಿಂದ ಗಿಜಿಗುಡುತ್ತಿದೆ.
ಚಳಿಗಾಲ ಆರಂಭವಾರೆ ಸಾಕು ಹಂಪಿಯ ಪ್ರವಾಸವನ್ನು ಒಮ್ಮೆಯಾದರೂ ಕೈಗೊಳ್ಳಲೇಬೇಕು ಎಂದು ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಅದರಲ್ಲೂ ಶಾಲಾ ಕಾಲೇಜುಗಳ ಪ್ರವಾಸ ಕೂಡ ಹೆಚ್ಚಾಗಿರುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಬೀದರ್, ವಿಜಯಪುರ, ಬೆಳಗಾವಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಿಂದ ಕಳೆದ ದಿನಗಳಿಂದ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜುಗಳ ಉಪನ್ಯಾಸಕರು ಮಕ್ಕಳನ್ನು ಕರೆದುಕೊಂಡು ಹಂಪಿ ಪರಿಸರದಲ್ಲಿ ಬಿಡು ಬಿಟ್ಟಿದ್ದಾರೆ. ಇಲ್ಲಿ ಆಗಮಿಸುವ ಮೊದಲು ನಗರದ ಕೂಗಳತೆಯಲ್ಲಿನ ತುಂಗಭದ್ರಾ ಜಲಾಶಯಕ್ಕೂ ಕರೆತಂದು ಮಕ್ಕಳಲ್ಲಿ ಹೊಸ ಅನುಭವನ್ನುಂಟುಮಾಡಿದೆ.
ನಾನಾ ಕಡೆಗಳಲ್ಲಿಂದ ಬರುವ ವಿದ್ಯಾರ್ಥಿಗಳು ಹಂಪಿಯ ಸಾಸಿವೆ ಕಾಳು ಗಣಪ, ಕಡಲೆ ಕಾಳು ಗಣಪ, ಉಗ್ರನರಸಿಂಹ, ಬಡವಿಲಿಂಗ, ಶ್ರೀಕೃಷ್ಣ ದೇವಸ್ಥಾನ, ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಚಕ್ರತೀರ್ಥ, ಸ್ಮಾರಕಗಳನ್ನು ಕಂಡು ಬೆರಗಾಗಿದ್ದಾರೆ. ಜತೆಗೆ ವಿಶ್ವವಿಖ್ಯಾತ ವಿಜಯವಿಠಲ ದೇವಸ್ಥಾನದ ಆವರಣದಲ್ಲಿನ ಕಲ್ಲಿನ ರಥಕಂಡು ಪುಳಕಿತರಾಗಿದ್ದಾರೆ. ಹಂಪಿಯ ಸ್ಮಾರಕ, ದೇವಸ್ಥಾನಗಳು ಹಾಗೂ ಕಲ್ಲು, ಬಂಡೆಗಳು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಹಂಪಿಯ ಸ್ಮಾರಕಗಳ ಬಗ್ಗೆ ಅಂತರ್ಜಲ ಹಾಗೂ ಪಠ್ಯ ಪುಸ್ತಕ ಸೇರಿದಂತೆ ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆವು. ಆದರೆ ಈ ಬಾರಿ ಇತಿಹಾಸದ ವಿಷಯವನ್ನು ಹೆಚ್ಚಿನ ಪ್ರಮಾಣದಲ್ಲಿ ಅರಿಯುವ ಸಲುವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿ ಮಿತ್ರರೊಂದಿಗೆ ಆಗಮಿಸಿರುವುದು ಖುಷಿಯಾಗಿದೆ. ಪ್ರವಾಸದ ಜತೆಗೆ ಪಠ್ಯದ ವಿಷಯಗಳನ್ನು ಖುದ್ದು ಭೇಟಿ ನೀಡಿ ಅರಿತುಕೊಳ್ಳಲು ಸಹಕಾರಿಯಾಗಿದೆ. ಇದರಿಂದ ವಾರ್ಷಿಕ ಪರೀಕ್ಷೆಗೆ ಹೆಚ್ಚು ಸಹಕಾರಿಯಾಗಲಿದೆ. ಜತೆಗೆ ಭವಿಷ್ಯದಲ್ಲಿ ಕೈಗೊಳ್ಳುವ ಉನ್ನತ ವ್ಯಾಸಂಗಕ್ಕೂ ಮಾರ್ಗದರ್ಶನವಾಗಲಿದೆ. ಹಂಪಿಯ ಅವಿಸ್ಮರಣೀಯ ಐತಿಹಾಸಿಕ ತಾಣವಾಗಿದೆ ಎನ್ನುತ್ತಾರೆ ಹಂಪಿ ವಿಜಯವಿಠಲ ದೇಗುಲಕ್ಕೆ ಭೇಟಿ ನೀಡಿದ ಕೆಲ ವಿದ್ಯಾರ್ಥಿಗಳು.
ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಕಳೆದ ದಿನಗಳಿಂದ ತಂಡೋಪ ತಂಡವಾಗಿ ಹಂಪಿಗೆ ಆಗಮಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳ ಸುತ್ತಮುತ್ತ ಕಣ್ಣು ಹಾಯಿಸಿದ ಕಡೆಗಳಲ್ಲಿ ಮಕ್ಕಳ ದಂಡು ಇದೆ. ಹಂಪಿ ಉತ್ಸವದ ನಂತರ ವ್ಯಾಪಾರ ಇಲ್ಲದೇ ತಲೆ ಮೇಲೆ ಕೈಹೊತ್ತು ಕೂಳಿತಿದ್ದ ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಸದ್ಯ ಕೈತುಂಬ ಕೆಲಸ ದೊರೆತಿದ್ದು, ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿನಿAದ ಹಂಪಿ ಸುಮಾರು 342 ಕಿ.ಮೀ ದೂರದಲ್ಲಿದ್ದರೆ, ಮೈಸೂರಿನಿಂದ 427 ಕಿ.ಮೀ ದೂರದಲ್ಲಿದೆ. ವಾರಾಂತ್ಯ ಅಥವಾ ರಜೆಗೆ ಹಂಪಿ ಪ್ರವಾಸ ಯೋಜಿಸಬಹುದು. ಈಗಿನ ವಾತವರಣ ಹಂಪಿಯ ಪ್ರವಾಸ ಮಾಡಲು ಯೋಗ್ಯವಾಗಿದೆ. ಆದರೆ ಒಂದು ದಿನದಲ್ಲಿ ಹಂಪಿ ಪ್ರವಾಸ ಅಸಧ್ಯ. ಒಂದು ದಿನದಲ್ಲಿ ಕೇವಲ ಒಂದೇರಡು ಸ್ಮಾರಕ ನೋಡ ಬಹುದು ಅಷ್ಟೆ. ಹಾಗಾದರೆ ಸ್ಮಾರಕಗಳ ನಗರಿಯಲ್ಲಿ ಕನಿಷ್ಠ ಎರಡು ದಿನಗಳು ಹಂಪಿಯ ಪ್ರವಾಸ ಮಾಡಬಹುದು. ಇನ್ನೂ ಸುತ್ತಮುತ್ತಲಿನ ಟಿಬಿಡ್ಯಾಂ, ಹಂಪಿ ಜೂ, ದರೋಜಿ ಕರಡಿ ಧಾಮ, ಕೊಪ್ಪಳದ ಆನಾಗುಂದಿ ಪ್ರದೇಶದಲ್ಲಿ ತಾಣಗಳು ನೋಡಬೇಕು ಎಂದು ಮೂರು ದಿನ ಕೂಡ ಸಾಕಗಲ್ಲ.