

ಹೊಸಪೇಟೆ: ಕಳೆದ ಒಂದು ವಾರಗಳಲ್ಲಿ ಭಾರೀ ಮಳೆಯಾಗಿದ್ದು ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ರಥ ಬೀದಿಯ ಸಾಲು ಮಂಟಪ ನೆಲಕ್ಕುರುಳಿದೆ.
ಹೊಸಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಿರೂಪಾಕ್ಷ ಬಜಾರ್ ನಲ್ಲಿರುವ 8 ಕಂಬಗಳ ಕಲ್ಲಿನ ಮಂಟಪ ಮಂಳವಾರ ಕುಸಿದು ಬಿದ್ದಿದೆ. ನೀರಿನಿಂದ ತುಂಬಿದ್ದ ಮಂಟಪ ಕುಸಿದಿದೆ ಎಂದು ಸ್ಥಳೀಯ ನಿವಾಸಿ ವಿಶ್ವನಾಥ್ ಮಾಳಗಿ ಖಚಿತಪಡಿಸಿದ್ದಾರೆ. ಸೋಮವಾರ ತಡರಾತ್ರಿ ಮಳೆಯಾಗಿದೆ. ಮಂಗಳವಾರ ಬೆಳಗಿನ ಜಾವ ಘಟನೆ ನಡೆದ ಇರಬಹುದು. ಘಟನೆ ವೇಳೆ ಸಮೀಪದಲ್ಲಿ ಯಾರೂ ಇರದ ಕಾರಣಪ್ರಾಣಾಪಾಯವೇನೂ ಸಂಭವಿಸಿಲ್ಲ.
ಈ ಹಿಂದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಸ್ಮಾರಕದ ಜೀರ್ಣೋದ್ದಾರದ ಮಾತನ್ನಾಡಿದ್ದರೂ ಯಾವ ಕೆಲಸವಾಗಿಲ್ಲ. ಯುನೆಸ್ಕೋ ಪಟ್ಟಿಗೆ ಸೇರಿದ ಹಂಪಿಗೆ ಕೋಟಿ ಗಟ್ಟಲೆ ಅನುದಾನ ಬಂದರೂ ಪ್ರಯೋಜನವಿಲ್ಲದಂತಾಗಿದೆ. ಮೊದಲು ಅತಿ ಅವಶ್ಯ ಇರುವ ಸ್ಮಾರಕಗಳ ಜೀರ್ಣೋದ್ಧಾರ ಆಗಬೇಕು ಎಂದು ಹಲವು ಬಾರಿ ಒತ್ತಾಯಿಸಿದರು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.