ಹಂಪಿಗೆ 5 ಲಕ್ಷಕ್ಕೂ ಅಧಿಕ ಪ್ರವಾಸಿಗರು

30 MANJU 04
Published on

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯ. ಆದರೆ ಕಳೆದ ಒಂದು ವಾರದಲ್ಲಿ 5 ಲಕ್ಷಕ್ಕೂ ಅಧಿಕ ಜನರು ಬೇಟಿ ನೀಡಿದ್ದಾರೆ. 2024ರ ಕೊನೆ ದಿನ ಹಾಗೂ 2025ರ ಮೊಲದ ದಿನ ಇನಷ್ಟು ಪ್ರವಾಸಿಗರು ಭೇಟಿ ನೀಡಲಿದ್ದಾರೆ.

ಇಲ್ಲಿ ದೇಶ-ವಿದೇಶಿಗರು ದಿನಕ್ಕೆ 50 ರಿಂದ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಎರಡನೇ ಶನಿವಾರ, ವಿಕೇಂಡ್, ಕ್ರೀಸ್‌ಮಸ್ ಹಬ್ಬದ ಸಾಲು ಸಾಲು ರಜೆ ಹಾಗೂ ಶಾಲಾ-ಕಾಲೇಜುಗಳ ಪ್ರವಾಸ ಮತ್ತೊಂಡೆದೆ ಅಂಜನಾದ್ರಿ ಮಾಲಾಧಾರಿಗಳು ಅಪಾರ ಸಂಖ್ಯೆಯಲ್ಲಿ ಬೇಟಿ ನೀಡಿದ್ದರಿಂದ ಹಂಪಿಯ ಬಹುತೇಕ ಸ್ಮಾರಕಗಳ ಆವರಣ ಪ್ರವಾಸಿಗರು ತುಂಬಿಕೊAಡಿದ್ದರು. ಲಾಡ್ಜ್, ರೆಸಾರ್ಟ್, ವಸತಿ ಗೃಹಗಳು ಸೇರಿ ಇತರೆ ಹೋಟೆಲ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಹಾಕಲಾಗಿದೆ. ಸಾಮಾನ್ಯ ದರಕ್ಕಿಂತ ಮೂಡ್ನಾಲ್ಕು ಪಟ್ಟು ಹೆಚ್ಚಿನ ಹಣ ಪ್ರವಾಸಿಗರಿಂದ ವಸುಲಿ ಮಾಡುತ್ತಿದ್ದಾರೆ. ಇನ್ನೂ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳ ಕೊರತೆ ಕಂಡಿತು. ಇನ್ನೂ ಡಿ.31 ವರ್ಷದ ಕೊನೆ ದಿನ ಹಾಗೂ ಜ.01 2025ರ ಮೊದಲ ದಿನ ಹಿನ್ನೆಲೆಯಲ್ಲಿ ಇನಷ್ಟು ಪ್ರವಾಸಿಗರು ಭೇಟಿ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net