

ಹೊಸಪೇಟೆ: ಹಂಪಿ ಉತ್ಸವಕ್ಕೆ ವಿಜಯನಗರ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದೆ. ಉತ್ಸವಕ್ಕಾಗಿ ಹಂಪಿಯಲ್ಲಿ ಜಿಲ್ಲೆಯ ನಗರ ಸಂಸ್ಥೆಗಳ ಡಿ ಗೃಪ್ ನೌಕರರು ಬೀಡು ಬಿಟ್ಟಿದ್ದು, ಸ್ವಚ್ಛತಾ ಕರ‍್ಯ ಭರದಿಂದ ಸಾಗಿದೆ.
ಜಿ-20 ಶೃಂಗಸಭೆಯಲ್ಲಿ ಕೈಗೊಂಡ ಸ್ವಚ್ಛತೆ ಮಾದರಿಯಲ್ಲೇ ಹಂಪಿ ಉತ್ಸವಕ್ಕಾಗಿ ಸ್ವಚ್ಛತೆ ಕರ‍್ಯ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ನೀಡಿದ ಸೂಚನೆ ಮೇರೆಗೆ ಜಿಲ್ಲಾ ನಗರ ಯೋಜನಾಧಿಕಾರಿ ಮನೋಹರ್ ಅವರು 250 ಪೌರ ಕರ‍್ಮಿಕರನ್ನು ನಿಯೋಜನೆ ಮಾಡಲು ಯೋಜನೆ ರೂಪಿಸಿದ್ದಾರೆ. ಇನ್ನೂ ಅಗತ್ಯ ಬಿದ್ದರೆ ಇನ್ನೂ 100 ಕರ‍್ಮಿಕರನ್ನು ನಿಯೋಜಿಸಲು ಕೂಡ ಅವರು ಸನ್ನದ್ಧರಾಗಿದ್ದಾರೆ.
ಕಳೆದ ಫೆ.12ರಿಂದ ಸ್ವಚ್ಛತೆ ಕರ‍್ಯ ನಡೆಯುತ್ತಿದೆ. ಇಲ್ಲಿನ ನಗರಸಭೆ, ತಾಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿ ಹಾಗೂ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಸ್ಥಳೀಯ ಸಂಸ್ಥೆಗಳ ಪೌರಾಕರ‍್ಮಿಕರು ಸೇರಿದಂತೆ ಹಂಪಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಧಿಕಾರ ನರ‍್ವಹಣಗಳಿಂದ 250 ಜನ ಡಿ ಗೌಪ್ ನೌಕರರು ಸ್ವಚ್ಛತಾ ಕರ‍್ಯದಲ್ಲಿ ತೊಡಗಿದ್ದಾರೆ.
ಗಾಯತ್ರಿಪೀಠದ ಬಯಲು ಜಾಗದಲ್ಲಿ ಪ್ರಮುಖ ವೇದಿಕೆ ನರ‍್ಮಾಣ ಮಾಡಲಾಗುತ್ತದೆ. ಹಂಪಿಯ ಎದುರು ಬಸವಣ್ಣ ಮಂಟಪ, ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಆವರಣ, ಸಾಸಿವೆಕಾಳು ಗಣಪತಿ ಮಂಟಪ, ಮಹಾ ನವಮಿ ದಿಬ್ಬದ ವೇದಿಕೆ ಹಾಗೂ ಗಜ ಶಾಲೆ ಬಳಿ ಧ್ವನಿ ಮತ್ತು ಬೆಳಕು ಕರ‍್ಯಕ್ರಮಕ್ಕಾಗಿದ ಬಳಿಯ ವೇದಿಗೆಳು ಹಾಗೂ ರಸ್ತೆಗಳಿಗೆ ಸ್ವಚ್ಛತೆ ನಡೆಸುತ್ತಿದ್ದಾರೆ. ಇನ್ನು ಜೆಸ್ಕಾಂನಿಂದ ವಿದ್ಯುತ್ ತಂತಿ, ಕಂಬಗಳ ಬದಲಿಸುವ ಕರ‍್ಯ ಕೂಡ ಭರದಿಂದ ಸಾಗಿದೆ.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಕೂಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಕಮಲಾಪುರ ಸ್ಥಳೀಯ ಸಂಸ್ಥೆ, ಹಂಪಿ, ಕಡ್ಡಿರಾಂಪುರ, ಮಲಪನಗುಡಿ ಗ್ರಾಪಂಗಳ ಸದಸ್ಯರ ಸಭೆ ನಡೆಸಿದ್ದಾರೆ. ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಸೇರಿ ಈ ಉತ್ಸವವನ್ನು ಜನೋತ್ಸವವನ್ನಾಗಿಸಲು ಈಗಾಗಲೇ ಪಣ ತೊಟ್ಟಿದ್ದಾರೆ.
ಹಂಪಿ ಉತ್ಸವದಲ್ಲಿ ಸ್ವಚ್ಛತೆಗೆ 250ರಿಂದ 300 ಪೌರ ಕರ‍್ಮಿಕರನ್ನು ಬಳಕೆ ಮಾಡಲು ಪ್ಲಾನ್ ರೂಪಿಸಲಾಗಿದೆ. ಈಗಾಗಲೇ 84 ಕರ‍್ಮಿಕರು ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ವಚ್ಛತಾ ಕರ‍್ಯ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಸೂಚಿಸಿದ್ದಾರೆ. ಅವರ ನರ‍್ದೇಶನದ ಮೇರೆಗೆ ಹಂಪಿಯಲ್ಲಿ ಸ್ವಚ್ಛತಾ ಕರ‍್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನಗರ ಯೋಜನಾ ನರ‍್ದೇಶಕ ಮನೋಹರ್ ಹೇಳಿದರು.
ಕಳೆದ ಹಂಪಿ ಉತ್ಸವದಲ್ಲಿ ಹಂಪಿಯಲ್ಲಿ ಸ್ವಚ್ಛತೆ ಕೈಗೊಂಡ ಪೌರ ಕರ‍್ಮಿಕರಿಗೆ ವಿವಿಐಪಿ ಪಾಸ್‌ಗಳನ್ನು ನೀಡಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮೆಚ್ಚುಗೆ ಗಳಿಸಿದ್ದರು. ಈ ಬಾರಿಯೂ ಪೌರ ಕರ‍್ಮಿಕರಿಗೆ ವಿವಿಐಪಿ ಪಾಸ್ ನೀಡುವ ಆಲೋಚನೆ ಹೊಂದಿದ್ದಾರೆ.
ಹಂಪಿ ಉತ್ಸವದ ನಿಮಿತ್ತ ಸ್ತಳೀಯ ಸಂಸ್ಥೆಗಳ ಸ್ವಚ್ಛತಾ ಕರ‍್ಮಿಕರಿಗೆ ಬಳಸಿಕೊಳಲಾಗುತ್ತಿದೆ. ಕಮಲಾಪುರದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಉತ್ಸವಕ್ಕೆ ವಿವಿಐಪಿ ಪಾಸ್ ಹಂವಿಕೆಯಲ್ಲಿ ಪೌರಾಕರ‍್ಮಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ ಹಂಪಿ ಉತ್ಸವದ ನಿಮಿತ್ತ ಸ್ವಚ್ಛತೆಗೆ 250 ಸ್ಥಳೀಯ ಸಂಸ್ಥೆಗಳ ಕರ‍್ಮಿಕರಿಗೆ ಬಳಸಿಕೊಳ್ಳಲಾಗುತ್ತಿದೆ. ಹಂಪಿಯ ವೇದಿಕೆ, ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತೆ ನಡೆಯುತ್ತಿದೆ. ಹಂಪಿ ಗ್ರಾಪಂ ಹಾಗೂ ಹಂಪಿ ನರ‍್ವಹಣೆ ಪ್ರಾಧಿಕಾರದಿಂದಲೂ ಸ್ವಚ್ಛತೆ ನಡೆಯುತ್ತಿದೆ. - ಮನೋಹರ್, ಪಿಡಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯನಗರ