ಎತ್ತು, ಟಗರು, ಶ್ವಾನಗಳ ಪ್ರದರ್ಶನ

Published on

ಹೊಸಪೇಟೆ : ಹಂಪಿ ಉತ್ಸವ ನಿಮಿತ್ತ ಫೆ.28 ರಂದು ಜಿಲ್ಲಾ ಮಟ್ಟದ ಎತ್ತುಗಳ ಪ್ರದರ್ಶನ, ಮಾ.01 ರಂದು ಜಿಲ್ಲಾಮಟ್ಟದ ಟಗರುಗಳ ಪ್ರದರ್ಶನ, ಮಾ.02 ರಂದು ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನವನ್ನು ಬೆಳಿಗ್ಗೆ 9 ಗಂಟೆಗೆ, ಕಮಲಾಪುರದ ಪೆಟ್ರೋಲ್ ಬಂಕ್ ಹಿಂಭಾಗದ ಹಂಪಿಗೆ ತೆರಳುವ ಮಾರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಪೋಮ್ ಸಿಂಗ್ ತಿಳಿಸಿದ್ದಾರೆ.

ಹಂಪಿ ಉತ್ಸವದಲ್ಲಿ ಜನಾಕರ್ಷಣೆಗೆ ವಿಶೇಷವಾಗಿ ಎತ್ತು, ಟಗರು ಹಾಗೂ ಶ್ವಾನಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ನಾನಾ ಭಾಗಗಳಿಂದ ಸುಮಾರು 200 ಜೋಡಿ ಎತ್ತುಗಳು, 200 ಟಗರುಗಳು ಹಾಗೂ 500 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 20 ವಿವಿಧ ತಳಿಯ ಶ್ವಾನಗಳು ಸೇರಿ ಹಲವಾರು ವಿಶೇಷ ತಳಿಯ ಶ್ವಾನಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಪ್ರದರ್ಶನದಲ್ಲಿ ಉತ್ತಮವೆನಿಸಿದ ಎತ್ತು, ಟಗರು, ಶ್ವಾನಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲಾಗುವುದು.

ವಿಶೇಷವಾಗಿ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಇಲಾಖೆಯ ಶ್ವಾನ ಪಡೆಯವರು ಪೊಲೀಸ್ ಶ್ವಾನಗಳ ಚಾಕಚಕ್ಯತೆಯ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಎತ್ತು, ಟಗರು ಮತ್ತು ಶ್ವಾನಗಳ ಪ್ರದರ್ಶನದಲ್ಲಿ ಭಾಗವಹಿಸುವ ಮಾಲೀಕರು ಫೆ.26 ರೊಳಗೆ ನೋಂದಾಣಿ ಮಾಡಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಾಣಿಗಾಗಿ : 9972791375, 9448262516, 9900199899, 9844524997, 8884023517, 7022109535, 7411838030, 9535612937, 8610494205 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net