

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ಮಾದರಿಯಲ್ಲಿ ಹಂಪಿ ಉತ್ಸವ ಆಚರಿಸಲಾಗುವುದು. ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಹಂಪಿಯಲ್ಲಿ ಬುಧವಾರ ಉತ್ಸವದ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ಸವದಲ್ಲಿ ಆರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. ಈ ಉತ್ಸವವನ್ನು ಜನೋತ್ಸವವನ್ನಾಗಿಸಲು ಎಲ್ಲಾ ಕ್ರಮವಹಿಸಲಾಗಿದೆ ಎಂದರು.
ಬಜೆಟ್‌ನಲ್ಲೂ ಹಂಪಿ ಉತ್ಸವಕ್ಕೆ ಅನುದಾನ ಒದಗಿಸಲು ಕ್ರಮವಹಿಸಲಾಗುವುದು. ಈ ಬಾರಿ 15 ಕೋಟಿ ರೂ. ಅಧಿಕ ವೆಚ್ಚದಲ್ಲಿ ಉತ್ಸವ ನಡೆಸಲಾಗುತ್ತಿದೆ. ಬೇಸಿಗೆ ಇರುವುದರಿಂದ ಅಗತ್ಯ ಸಿದ್ದತೆ ನಡೆಸಲಾಗಿದೆ. ಎಂ.ಪ್ರಕಾಶ್ ಅವರು ನವೆಂಬರ್ ನಲ್ಲಿ ಆಚರಣೆ ಮಾಡುತ್ತಿದ್ದರು. ಅದೇ ತಿಂಗಳು ಉತ್ತಮವಾಗಿರುತ್ತದೆ. ಕಾರಣಾಂತರದಿAದ ಮುಂದುಡಲಾಗಿದೆ. ಸಿಎಂ ಕಾಲು ಸಮಸ್ಯೆಯಿಂದ ಎಪ್ರೀಲ್‌ನಲ್ಲಿ ಮಾಡಲು ಸೂಚನೆ ನೀಡಿದರು. ಆದರೆ ಈಗಾಗಲೇ ತಡವಾಗಿದೆ. ಸಿದ್ದತೆ ಕೂಡ ನಡೆದಿದೆ. ಮಾಡಲೇ ಬೇಕು ಎಂದು ಮನವೋಲಿಸಿದೆ. ಮುಂದಿನ ಬಾರಿ ಉತ್ಸವ ನವೆಂಬರ್‌ನಲ್ಲೇ ಆಚರಣೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದರು.