ಹಂಪಿಯಲ್ಲಿ ನಾಲ್ವರು ಆತ್ಮಹತ್ಯೆಗೆ ಯತ್ನ ಒಬ್ಬರು ಸಾವು

19 MANJU 01
Published on

ಹೊಸಪೇಟೆ: ಸಾಲ ಬಾಧೆಗೆ ಸಿಲುಕಿದ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು , ಒಬ್ಬರು ಮೃತಪಟ್ಟಿರುವ ದಾರುಣ ಘಟನೆ ಹಂಪಿಯ ಸರಸ್ವತಿ ದೇಗುಲ ಬಳಿ ಬುಧವಾರ ನಡೆದಿದೆ.

ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿ ನಿವಾಸಿ ಚಂದ್ರಯ್ಯ ಎನ್ನುವರು ಕುಟುಂಬದ ಸದಸ್ಯರು ಸಾಲಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ ಚಂದ್ರಯ್ಯ ಸಾವನ್ನಪ್ಪಿದ್ದಾರೆ. ಇನ್ನುಳಿದ ಪತ್ನಿ ಸೌಮ್ಯ 36, ಮಗಳು ಭವಾನಿ(12), ಮಗ ಶಿವು (8) ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಸ್ ಬಿಐ ಸೇವಾ ಕೇಂದ್ರ ನಡೆಸುತ್ತಿದ್ದ ಚಂದ್ರಯ್ಯ, ಹಂಪಿ ಪ್ರವಾಸಕ್ಕೆ ಬಂದ ಇವರು, ಮಂಗಳವಾರ ತುಂಗಭದ್ರಾ ಜಲಾಶಯ ವೀಕ್ಷಣೆ ಮಾಡಿ, ಹೊಟೇಲ್ ವೊಂದರಲ್ಲಿ ಉಳಿಸಲದುಕೊಂಡಿದ್ದಾರೆ. ಬುಧವಾರ ಹಂಪಿಯಲ್ಲಿ ಅಂದಾಂಜು 8ಗಂಟೆಗೆ ನಾಲ್ಕು ಜನ ಕ್ರಿಮಿನಾಶಕ ಸೇವೆನೆ ಮಾಡಿದ್ದಾರೆ.

ಕುಟುಂಬದ ನರ‍್ವಹಣೆಗಾಗಿ ಕೊಟ್ಟೂರಿನ ಜಗದೀಶ್, ಶ್ರೀಕಾಂತ್ ಶೆಟ್ಟಿ, ವಾಮಯ್ಯ, ವಂಶಿಕಟ್ಟಿ, ಬಸವರಾಜ್ ಎಂಬುವರ ಬಳಿ ಮಾಡಿದ ಸಾಲ ಮಾಡಿದರು. ಸಾಲ ಕೊಟ್ಟವರು ಕೊಟ್ಟ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಸಿದ್ದಾರೆ. ಚಂದ್ರಯ್ಯ ಪತ್ನಿ ಸೌಮ್ಯ ತನ್ನ ಅಕ್ಕನ ಮಗ ಸಂರ‍್ಷಗೆ ಕರೆ ಮಾಡಿ ನಾವೇ ಎಲ್ಲರು ಹಂಪಿಯಲ್ಲಿ ವಿಷ ಸೇವನೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ತನ್ನ ಸಂರ‍್ಕದಲ್ಲಿ ಸ್ಥಳೀಯರ ಪೊಲೀಸರಿಗೆ ಮಾಹಿತಿ ತಿಳಸಿದ್ದಾರೆ. ಮಾಹಿತಿ ಪಡೆದ ನಂತರ ಹಂಪಿ ಪೊಲೀಸರು ಚಂದ್ರಯ್ಯ ಅವರ ಕುಟುಂಬವನ್ನು ಆಂಬ್ಯುಲೆನ್ಸ್ ನಲ್ಲಿ ನಗರದ ರ‍್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚಂದ್ರಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net