ಹಂಪಿಯಲ್ಲಿ ಸ್ವಚ್ಛತಾ ಸೇವೆ ಕಾರ್ಯ

30 MANJU 04
Published on

ಹೊಸಪೇಟೆ: ಗಾಂಧಿ ಜಯಂತಿ ನಿಮಿತ್ತ ತಾಲೂಕಿನ ಕಮಲಾಪುರದ ಹಂಪಿ ವಿರೂಪಾಕ್ಷೇಶ್ವರ ಪದವಿ ಕಾಲೇಜಿನಿಂದ ಹಂಪಿಯ ಇವಿಧ ಕಡೆ ಸೋಮವಾರ ಸ್ವಚ್ಛತಾ ಸೇವೆ ಕಾರ್ಯಕ್ರಮ ನಡೆಯಿತು.

ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಎಂಬ ಅಭಿಯಾನವನ್ನು ಕಾಲೇಜಿನ ಎನ್‌ಎಸ್‌ಎಸ್ ನೇತೃತ್ವದಲ್ಲಿ ತಾಲೂಕಿನ ಕಮಲಾಪುರದ ಕೃಷ್ಣ ದೇವರಾಯ ವೃತ್ತದಿಂದ ರಾಣಿ ಸ್ನಾನ ಗೃಹ, ಲೋಟಸ್ ಮಹಲ್ ವರೆಗೆ ರಸ್ತೆ ಹಾಗೂ ಆವರಣ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಎನ್‌ಎಸ್‌ಎಸ್ ಸ್ವಯಂಸೇವಕರಿAದ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ಪ್ಲಾಸ್ಟಿಕ್ ನಿರ್ಮೂಲನೆ ಮಾಡಿ, ಸ್ವಚ್ಛವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಜಾಗೃತಿ ಮೂಡಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಬಸವರಾಜ ಎಮ್ಮಿಗನೂರ್, ಎನ್‌ಎಸ್‌ಎಸ್ ಅಧಿಕಾರಿ ಕೆ.ವೀಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net