ಹಂಪಿಯಲ್ಲಿ ರಸ್ತೆ ಗುಂಡಿಯಲ್ಲಿ ಕಾರು ಸಿಲುಕಿ ಪ್ರವಾಸಿಗರ ಪರದಾಟ!

14 HPT 5
Published on

ಹೊಸಪೇಟೆ: ಹಂಪಿಯ ಕಮಲ ಮಹಲ್ ತೆರಳುವ ಮಾರ್ಗಮಧ್ಯದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಬದಿಗೆ ತೋಡಿರುವ ಗುಂಡಿಯಿAದಾಗಿ ಪ್ರವಾಸಿಗರು ಪರದಾಡುವಂತಾಗಿದೆ.

ಇಲ್ಲಿನ ಪ್ರವಾಸೋದ್ಯಮ ಇಲಾಖೆ ಕಚೇರಿ ಮುಂದಿನ ರಸ್ತೆಯ ಎರಡೂ ಬದಿಗೆ ಗುಂಡಿ ತೋಡಿದ್ದರಿಂದ ಪ್ರತಿನಿತ್ಯ ಒಂದಿಲ್ಲೊAದು ವಾಹನ ಸಿಲುಕಿಕೊಳ್ಳುತ್ತಿದ್ದು, ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಸೋಮವಾರ ಮಧ್ಯಾಹ್ನ ರಾಜಸ್ಥಾನ ನೋಂದಣಿಯ ವಾಹನದಲ್ಲಿ ಆಗಮಿಸಿದ್ದ ಪ್ರವಾಸಿಗರು ಕಮಲ್ ಮಹಲ್ ವೀಕ್ಷಿಸಿ, ವಾಪಸ್ಸಾಗುತ್ತಿರುವಾಗ ಮತ್ತೊಂದು ವಾಹನ ಮುಖಾಮುಖಿಯಾಗಿದೆ. ಈ ಪೈಕಿ ಒಂದು ವಾಹನ ರಸ್ತೆ ಬದಿಗೆ ಸರಿಯುತ್ತಿದ್ದಂತೆ ಕಾರಿನ ಚಕ್ರಗಳು ಗುಂಡಿಗೆ ಇಳಿದು ಸಿಲುಕಿಕೊಂಡಿತು. ತಕ್ಷಣ ನೆರವಿಗೆ ಬಂದ ಸಾರ್ವಜನಿಕರು ಕಾರು ಎತ್ತಿ ರಸ್ತೆ ದಾಟಿಸಲು ಹರಸಾಹಸ ನಡೆಸಿದರು.

ಜಿ- ೨೦ ಸಂದರ್ಭದಲ್ಲಿ ವಿವಿಧ ಇಲಾಖೆಗಳು ರಸ್ತೆ ಕಾಮಗಾರಿ ನಿರ್ವಹಿಸಿದ್ದು, ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರಿಂದಾಗಿ ಪ್ರತಿನಿತ್ಯ ಒಂದಿಲ್ಲೊAದು ವಾಹನ ರಸ್ತೆ ಬದಿಯ ಗುಂಡಿಯಲ್ಲಿ ಸಿಲುಕುತ್ತಿದ್ದು, ಪ್ರವಾಸಿಗರು ಪರದಾಟುವಂತಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net