

ಮಾನ್ವಿ: ಪಟ್ಟಣದ ತಾಪಂ ಸಭಾಂಗಣದ ಮೇಲೆ ನವೀಕರಣಗೊಂಡ ಶಾಸಕರ ಕಾರ್ಯಾಲಯವನ್ನು ಶುಕ್ರವಾರ ಎಂಎಲ್‌ಎ ಹಂಪಯ್ಯನಾಯಕ ಉದ್ಘಾಟಿಸಿದರು.
ನವೀಕರಣಗೊಂಡ ಕಾರ್ಯಾಲಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಶಾಸಕರು, ಕ್ಷೇತ್ರದ ಸಾರ್ವಜನಿಕರ ಏನೇ ಸಮಸ್ಯೆಗಳಿದ್ದರೂ ಕಚೇರಿಯಲ್ಲಿ ದೂರು ಸಲ್ಲಿಸಬೇಕು. ನಾನು ಇಲ್ಲದಿದ್ದಾಗ ಆಪ್ತ ಕಾರ್ಯದರ್ಶಿಗೆ ಕುಂದು-ಕೊರತೆ ಬಗ್ಗೆ ಗಮನಕ್ಕೆ ತರಬಹುದು. ಜನರ ತೊಂದರೆಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಶರಣಪ್ಪ ನಾಯಕ ಗುಡದಿನ್ನಿ, ಬಿ.ಕೆ.ಅಮರೇಶಪ್ಪ, ಸಣ್ಣ ಬಸನಗೌಡ ಬ್ಯಾಗವಾಟ, ದೇವೇಂದ್ರಪ್ಪ ಬೊಮ್ಮನಾಳ, ಶಿವರಾಜ ನಾಯಕ ಬಲ್ಲಟಗಿ, ಶೇಖ್ ಸತ್ತಾರ ಬಂಗ್ಲೆವಾಲೆ, ತಾಪಂ ಇಒ ಸೈಯದ್ ಪಟೇಲ್, ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಇನ್ನಿತರರಿದ್ದರು.