ಹಮಾಲಿ ಕಾರ್ಮಿಕರ ಮಕ್ಕಳ ಶಿಕ್ಷಣ ಅಭಿವದ್ಧಿಗೆ ಸಹಕಾರಿಯಾಗಿದೆ

Hamali workers' education is helpful
ಬನಹಟ್ಟಿ ಕಾರ್ಮಿಕ ಸಂಘದ ಕಾರ್ಯಾಲಾಯದಲ್ಲಿ ಜರುಗಿದ ಸಮಾರಂಭದಲ್ಲಿ ರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೇಡರೇಶನ್ ರಾಜ್ಯ ಉಪಾಧ್ಯಕ್ಷರಾದ ಕಲ್ಲಪ್ಪ ಬಿ ಕಡಬಲ್ಲವರ, ಈರಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಬಸಯ್ಯ ವಸದ, ಸದಾಶಿವ ಹನಗಂಡಿ ಇದ್ದರು.
Published on


ರಬಕವಿ/ಬನಹಟ್ಟಿ: ಇಂದಿನ ಆಧುನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಮಾಲಿ ಕಾರ್ಮಿಕರಂತ ಬಡ ಅಸಂಘಟಿತ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗದೇ ಉನ್ನತ ಶಿಕ್ಷಣ ಪಡೆಯಲು ಪಿ. ಸಿಂಘ್ವಿ ಸಂಸ್ಥೆ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೇಡರೇಶನ್ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕಲ್ಲಪ್ಪ ಬಿ ಕಡಬಲ್ಲವರ ಹೇಳಿದರು.

ಶುಕ್ರವಾರ ಬನಹಟ್ಟಿ ಹಮಾಲಿ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. ಹಾಮಾಲಿ ಕಾರ್ಮಿಕರ ಮಕ್ಕಳೂ ಸಹ ಸಮಾಜದ ಮುನ್ನೆಲೆಗೆ ಬರುವಂತೆ ಮಾಡಲು ಮಾರ್ಗದರ್ಶನ ಮತ್ತು ಸಹಾಯವನ್ನು ಮಾಡುತ್ತಿರುವ ಬೆಂಗಳೂರಿನ ಪಿ. ಸಿಂಘ್ವಿ ಚಾರಿಟೇಬಲ್ ಟ್ರಸ್ಟ್ ಅವರ ಶಿಕ್ಷಾದೀಪ ವಿದ್ಯಾರ್ಥಿ ವೇತನ ಯೋಜನೆಯನ್ನು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಮುಖಾಂತರ ಜಾರಿ ಮಾಡಲಾಗುತ್ತಿರುವುದು ಸಂತಸದ ವಿಷಯ ಎಂದರು.

ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಬಸಯ್ಯ ವಸದ ಮಾತನಾಡಿ, ಕಳೆದ 12 ವರ್ಷಗಳಿಂದ ನಿರಂತರವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ, ಸಂಶೋಧನಾ ಮತ್ತು ತಾಂತ್ರಿಕ ಕೋರ್ಸಗಳನ್ನು ಓದುತ್ತಿರುವ ಹಮಾಲಿ ಕಾರ್ಮಿಕರಂತ ಬಡ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಅವರ ಶೇಕಡಾವಾರು ಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಸಹಾಯಕಾರಿಯಾಗಿದೆ. ಹಮಾಲಿ ಕಾರ್ಮಿಕರಂತ ಬಡ ಅಸಂಘಟಿತ ಕಾರ್ಮಿಕರ ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಸದ ಹೇಳಿದರು.

ಇಂದು ಬನಹಟ್ಟಿ ವಿ ಆರ್ ಎಲ್ ಕಾರ್ಯಲಯದಲ್ಲಿ ನಡೆದ ಲಾನುಭವಿ ವಿದ್ಯಾರ್ಥಿಗಳು ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು ’’ಶಿಕ್ಷಾದೀಪ’’ ವಿದ್ಯಾರ್ಥಿ ವೇತನವು ಹಮಾಲಿ ಕಾರ್ಮಿಕರಂತ ಬಡ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ’’ಆಶಾದೀಪ’’ವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಮಿಕರಿಂದ ಸನ್ಮಾನ ಸ್ವಿಕರಿ ಮಾತನಾಡಿದ ಸಂಸ್ಥೆಯ ಶಿಕ್ಷಾದೀಪ ಯೋಜನೆಯ ಮುಖ್ಯಸ್ಥ ಈರಪ್ಪ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಅವರ ಪಾಲಕರೊಂದಿಗೆ ಸಂವಹನ, ಶಿಕ್ಷಾದೀಪ ವಿದ್ಯಾರ್ಥಿ ವೇತನದ ಮಾಹಿತಿ, ಶಿಕ್ಷಣದ ಪ್ರಾಮುಖ್ಯತೆ, ವತ್ತಿ ಯೋಜನೆ ಮತ್ತು ಶಿಕ್ಷಣ ಪೂರೈಸಿದ ಮಕ್ಕಳಿಗೆ ಉದ್ಯೋಗದ ಮಾರ್ಗದರ್ಶನವನ್ನು ನೀಡಿದರು. ಹನ್ನೆರಡು ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ರಾಜ್ಯದಾದ್ಯಂತ 45 ರಿಂದ 50 ಲಕ್ಷ ರೂಪಾಯಿಗಳನ್ನು ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತ ಬಂದಿದ್ದೇವೆ. ಈ ವರ್ಷ ವಿಜಯಪುರ ಜಿಲ್ಲೆಯ 12 ಹಮಾಲಿ ಕಾರ್ಮಿಕರ ಮಕ್ಕಳಿಗೆ ಸುಮಾರು 90 ಸಾವಿರಕ್ಕೂ ಅದೀಕ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ ಎಂದರು.

ಸಭೆಯಲ್ಲಿ ಮುಖಂಡರಾದ ಸದಾಶಿವ ಆಲಕನೂರ, ನಾಗಪ್ಪ ಹುದ್ದಾರ, ರಾಜು ಗೊಂಗಡಿ, ಸದಾಶಿವ ಹನಗಂಡಿ, ಕರೆಪ್ಪ ಆಲಕನೂರ, ಹಣಮಂತ ಕುಡಚಿ, ಆನಂದ ಭಜಂತ್ರಿ, ನಾಗಪ್ಪ ಮಹೇಷವಾಡಗಿ, ಪ್ರಶಾಂತ ತಳವಾರ, ರಾಜು ಬುರುಡ, ರಾಜು ಸೌದಾಗರ, ಅಮೀರ ಸೌದಾಗರ, ಬಸವರಾಜ ಕರಿಗಾರ, ಬಾದಶಾಹಾ ಮಂಟೂರ, ಸಿಂಧೂರ ಬಂಗೇನವರ, ಭೀಮಶಿ ಮಹೇಷವಾಡಗಿ, ಮೈಬುಸಾಬ ಸೌದಾಗರ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net