ಹಳ್ಳಿಗಟ್ಟು ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ಎ ಗ್ರೇಡ್

30mdkd11 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಹಳ್ಳಿಗಟ್ಟು ಗ್ರಾಮದಲ್ಲಿರುವ ಕೂರ್ಗ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು (ಇಂಜಿನಿಯರಿಂಗ್ ಕಾಲೇಜು) ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ಎ ಗ್ರೇಡ್ ಮಾನ್ಯತೆ ಪಡೆದುಕೊಂಡಿದೆ.

ಸಿಐಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಪ್ರಾಂಶುಪಾಲ ಡಾ.ಎಂ.ಬಸವರಾಜ್ ದಾಖಲೆ ಬಿಡುಗಡೆ ಮಾಡಿದರು. ನ್ಯಾಕ್ ಮಾರ್ಗಸೂಚಿ ಅನುಗುಣವಾಗಿ ಮೌಲ್ಯಮಾಪನ ಮಾಡಲು ಮೌಲ್ಯಮಾಪಕರ ತಂಡ ಡಿ.೨೨ ಮತ್ತು ೨೩ ರಂದು ಕಾಲೇಜಿಗೆ ಭೇಟಿ ನೀಡಿತ್ತು.

ಅಕಾಡೆಮಿಕ್ ಕೌನ್ಸಿಲ್ ಸದಸ್ಯೆ ಡಾ.ಪುಷ್ಪಾ ಕುಟ್ಟಣ್ಣ, ಡಾ.ಪೊನ್ನಮ್ಮ ಮಾಚಯ್ಯ, ಕೆ.ಎಸ್. ತಿಮ್ಮಯ್ಯ ಅವರು ಸಿಐಟಿ ತಂಡಕ್ಕೆ ನ್ಯಾಕ್ ತಯಾರಿ ನಡೆಸಲು ಮಾರ್ಗದರ್ಶನ ನೀಡಿದರು. ಸಿಐಟಿ ನ್ಯಾಕ್ ಸಂಯೋಜಕ ಡಾ.ರಾಮಕೃಷ್ಣ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯೋಜಕ ಪ್ರೊ.ಬಿ.ಜೆ. ಕಿಶನ್ ಕರುಂಬಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net