

ಬ್ಯಾಕೋಡು: ಶರಾವತಿ ಹಿನ್ನೀರಿನ ಹಲ್ಕೆ-ಮುಪ್ಪಾನೆ ಲಾಂಚ್ ಸೇವೆ ಭಾನುವಾರದಿಂದ ಪುನರಾರಂಭವಾಗಿದೆ. ಆ. 25ರಂದು ಹಲ್ಕೆ- ಮುಪ್ಪಾನೆ ಲಾಂಚ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು. ಲಾಂಚ್ ಸೇವೆ ಏಕಾಏಕಿ ವ್ಯತ್ಯಯದಿಂದ ದ್ವೀಪದ ಜನತೆ ಹಾಗೂ ಸಿಗಂದೂರು ಭಕ್ತರಿಗೆ ಸಾಕಷ್ಟು ಅನಾನುಕೂಲ ಉಂಟಾಗಿತ್ತು. ಶೀಘ್ರವೇ ಲಾಂಚ್ ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದರು. ಈಗಾಗಲೇ ಲಾಂಚ್ ಒಳಭಾಗದಲ್ಲಿ ತಾಂತ್ರಿಕ ದೋಷ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಸಂಚಾರ ಆರಂಭಿಸಲಾಗಿದೆ ಎಂದು ಕಡವು ನಿರೀಕ್ಷಕ ಧನೇಂದ್ರಕುಮಾರ್ ಮಾಹಿತಿ ನೀಡಿದ್ದಾರೆ.