ಹಲ್ಯಾಳ ಶಿವರಾಯ ಮುತ್ಯಾನ ಪಲ್ಲಕಿ ಉತ್ಸವ ಸಡಗರ

2
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಶಿವರಾಯ ಮುತ್ಯಾನ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಶಿವರಾಯ ಮುತ್ಯಾನ ಅವರ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಬಂಡಾರದೋಕುಳಿ ಮಧ್ಯೆ ಪಲ್ಲಕಿ ಉತ್ಸವ ಜರುಗಿತು. ಹುಳಗಬಾಳ, ಅಲಖನೂರ, ಮುರಗುಂಡಿ, ರಾಯಬಾಗ, ಅವರಖೋಡ ಸೇರಿ ಹಲವಾರು ಗ್ರಾಮದ ಅಲಗಮೇಳ ಹಾಗೂ ಡೊಳ್ಳು ಕುಣಿತ ಕಲಾಪ್ರದರ್ಶನ ಜರುಗಿತು. ಭಕ್ತರು ಪರಸ್ಪರ ಭಂಡಾರ ಎರಚಿ ಕುಣಿದು ಕುಪ್ಪಳಿಸಿದರು.

ಮಧ್ಯಾಹ್ನ ಜಾತ್ರಾ ಕಮಿಟಿಯಿಂದ ಅನ್ನ ಪ್ರಸಾದ ಸೇವೆ ಜರುಗಿತು. ಅರ್ಚಕ ಸೋಮಣ್ಣ ಪೂಜಾರಿ, ರಾಮಪ್ಪ ಗುರವ, ಮುರಗೆಪ್ಪ ಬಾಗಿ, ಗುಂಡು ಹಿರೇಕುರಬರ, ಮುತ್ತಪ್ಪ ಸನದಿ, ಆಕಾಶ ಬಾಗಿ, ಧರೆಪ್ಪ ಮುಕನಿ, ಹನುಮಂತ ಲೋಕುರ, ಧರೆಪ್ಪ ಮಗದುಮ್ಮ, ಪ್ರಭು ಬಾಗಿ, ಪವನ ಮುರಗುಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net