ಪಂಜಾಬ್‌ ವಿವಿಯೊದಿಗೆ ಹಳಿಯಾಳ ವಿಡಿಐಟಿ ಒಡಂಬಡಿಕೆ

VDIT Agriment with panjab
Published on
ಹಳಿಯಾಳ ಕೆ ಎಲ್ ಎಸ್ ವಿ ಡಿ ಐ ಟಿ ಮಹಾವಿದ್ಯಾಲಯವು  ಪಂಜಾಬಿನ ಲ್ಯಾಮರಿನ್  ಟೆಕ್  ಸ್ಕಿಲ್ ವಿಶ್ವವಿದ್ಯಾಲಯದೊಂದಿಗೆ ಜುಲೈ 3 ರಂದು ಒಡಂಬಡಿಕೆ ಮಾಡಿಕೊಂಡಿದೆ ಎಂದು
ಮಹಾವಿದ್ಯಾಲಯದ ಪ್ರಾಚಾರ್ಯ  ಡಾ. ವಿ ಎ ಕುಲಕರ್ಣಿ  ತಿಳಿಸಿದ್ದಾರೆ.
ಮಹಾವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಲ್ಯಾಮರಿನ್   ಟೆಕ್ ಸ್ಕಿಲ್  ವಿಶ್ವವಿದ್ಯಾಲಯದ ಉಪಕುಲಪತಿಗಳಾದ  ಡಾ. ಎಂ ಬಿ ಗುರುರಾಜ್  ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಗೊಳಿಸುವುದರ  ಮೂಲಕ ಉದ್ಯೋಗಾವಕಾಶ ಸೃಷ್ಟಿ ಮಾಡುವ ಉದ್ದೇಶದಿಂದ ವಿ ಡಿ ಐ ಟಿ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ತಮ್ಮ ವಿಶ್ವವಿದ್ಯಾಲಯವು  ಕೌಶಲ್ಯ ಅಭಿವೃದ್ಧಿಪಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಯಶಸ್ವಿಯಾಗಿದೆ ಎಂದು ತಿಳಿಸಿದರು. ಈ ಒಡಂಬಡಿಕೆಯಿಂದ ವಿದ್ಯಾರ್ಥಿಗಳು ಕೈಗಾರಿಕಾ ಕ್ಷೇತ್ರ ಬಯಸುವ ಕೌಶಲ್ಯವನ್ನು ಹೊಂದಲು ಸಹಕಾರಿಯಾಗುವುದು  ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ  ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ  ಪ್ರಶಾಂತ್ ಕುಲಕರ್ಣಿ  ಲ್ಯಾಮರಿನ್ ವಿಶ್ವವಿದ್ಯಾಲಯದೊಂದಿಗೆ  ಒಡಂಬಡಿಕೆ ಹೊಂದಿದ   ಉತ್ತರ ಕರ್ನಾಟಕದ ಏಕೈಕ ತಾಂತ್ರಿಕ ಮಹಾವಿದ್ಯಾಲಯ ವಿ ಡಿ ಐ ಟಿ ಆಗಿರುವುದು ಸಂತಸದ ವಿಷಯ ಎಂದರು.
ಪ್ರಾಚಾರ್ಯ  ಡಾ. ವಿ ಎ ಕುಲಕರ್ಣಿ  ಈ ಒಡಂಬಡಿಕೆಯು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ  ಪುಷ್ಟಿ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿ ಆರ್ ಡಿ ಎಂ ಟ್ರಸ್ಟ್ ನ ಆಡಳಿತ ಅಧಿಕಾರಿ  ಪ್ರಕಾಶ್ ಪ್ರಭು ಲ್ಯಾಮರಿನ್ ಟೆಕ್ ಸ್ಕಿಲ್  ಯೂನಿವರ್ಸಿಟಿಯ ಪದಾಧಿಕಾರಿಗಳು ಇದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ  ಡಾ. ಕೆ ಎಸ್ ಪೂಜಾರ್ ಸ್ವಾಗತಿಸಿದರು. ಪ್ರೊ. ಬಿ ಬಿ ಪಾಟೀಲ್ ವಂದಿಸಿದರು. ಪ್ರೊ. ನವೀನ್ ಹಿರೇಮಠ  ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net