ಬೇಡಿಕೆ ಈಡೇರಿಸುವವರೆಗೂ ಕಬ್ಬು ಕಡಿಯಬೇಡಿ: ಸುನೀಲ ಹೆಗಡೆ ರೈತರಿಗೆ ಕೋರಿಗೆ

Suneel Hegde
Published on
ಹಳಿಯಾಳ: ಕಬ್ಬು ಬೆಳೆಗಾರ ರೈತರ ನ್ಯಾಯಯುತ ಬೇಡಿಕೆಗಳನ್ನು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಈಡೇರಿಸುವವರೆಗೆ ಯಾರು ರೈತರು ಕಬ್ಬು ಕಡಿಯಬೇಡಿ ಮತ್ತು ಸಾಗಿಸಬೇಡಿ  ನಮ್ಮ ಬೇಷರತ್ ಸಂಪೂರ್ಣ ಬೆಂಬಲ ನಿಮ್ಮೊಂದಿಗೆ ಇದೆ ಎಂದು ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ
ಸದಸ್ಯರು ಮತ್ತು ಮಾಜಿ ಶಾಸಕರಾದ ಸುನೀಲ್ ಹೆಗಡೆ ರೈತರಿಗೆ ಕರೆ ನೀಡಿದ್ದಾರೆ.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಬಿಜೆಪಿ ಪಕ್ಷದಿಂದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕಳೆದ ವಾರದ ಹಿಂದೆ ತಹಶೀಲ್ದಾರ್ ಅವರಿಗೆ ಭೇಟಿ ಮಾಡಿ ರೈತರ ನ್ಯಾಯಯುತ ಬೇಡಿಕೆಗಳಾದ ಕಟಾವು ಮತ್ತು ಸಾಗಾಣಿಕ ವೆಚ್ಚದಲ್ಲಿ ಕಾರ್ಖಾನೆ ರೈತರಿಂದ ಹೆಚ್ಚುವರಿಯಾಗಿ ಕಡಿತ ಮಾಡಿಕೊಂಡಿರುವ ಪ್ರತಿಟನ್ ಕಬ್ಬಿಗೆ 256 ರೂ ದಂತೆ ಒಟ್ಟೂ 26 ಕೋಟಿ ರೂ ಹಣವನ್ನು ಕಾರ್ಖಾನೆ ಆರಂಭಕ್ಕೂ ಮುಂಚೆ ಪಾವತಿಸಬೇಕು. ತೂಕ ಯಂತ್ರ ಹೊರಗಡೆ ಸ್ಥಾಪಿಸುವ ವರೆಗೂ ತೂಕ ಯಂತ್ರವನ್ನು ತಾಲೂಕಾಡಳಿತ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು, ದರ ನಿಗದಿಪಡಿಸಬೇಕು ಎಂದು ಆಗ್ರಹಿಸಲಾಗಿತ್ತು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿ ದಿ.22 ವರೆಗೆ ಸಮಯ ನೀಡಲಾಗಿತ್ತು ಆದರೇ ಕಾರ್ಖಾನೆಯಿಂದ ರೈತ ವಿರೋಧಿ ನೀತಿ ಮುಂದುವರಿದಿರುವುದರಿಂದ ಈಗ  ನಾವು ಕೂಡ ಹೋರಾಟ ನಿರತ ರೈತರಿಗೆ ಬೆಂಬಲ ಸೂಚಿಸಿ ಹೋರಾಟಕ್ಕೆ ಧುಮುಕುವುದಾಗಿ ತಿಳಿಸಿದರು.
ರೈತರ ನ್ಯಾಯಯುತ ಬೇಡಿಕೆ ಈಡೇರಿಸದೆ ತರಾತುರಿಯಲ್ಲಿ ಕಾರ್ಖಾನೆ ಆರಂಭಿಸಲು ಹೋರಟಿರುವುದು ಏಕೆ ? ಎಂದು ಪ್ರಶ್ನೀಸಿದ ಹೆಗಡೆ ಈ ಹಿಂದೆ ಸಕ್ಕರೆ ಆಯುಕ್ತರಿಂದ  ಕೇವಲ ಒಂದು ವರ್ಷದ ಲೆಕ್ಕ ಪರಿಶೋಧನೆಯಲ್ಲಿಯೇ ಕಾರ್ಖಾನೆಯ ವಂಚನೆ ಬೆಳಕಿಗೆ ಬಂದಿದೆ. ಇದು 5 ವರ್ಷಗಳ ಆಡಿಟ್ ಆದರೇ ನೂರು ಕೋಟಿಗೂ ಅಧಿಕ  ರೈತರ ಹಣ ಸೂಲಿಗೆ ಮಾಡಲಾಗಿದೆ‌ ಎಂದು ಆಪಾದಿಸಿದರು.
ಕಾರ್ಖಾನೆ ಪ್ರತಿವರ್ಷ ರೈತರಿಗೆ ಸಮಸ್ಯೆ ಮಾಡುತ್ತಿದೆ. ನ್ಯಾಯಯುತ ಬೆಲೆ ನೀಡದೆ, ಬಾಕಿ ಹಣ ಪಾವತಿಸದೆ ಅನ್ಯಾಯ ಮಾಡುತ್ತಿದ್ದು ರೈತರ ನ್ಯಾಯಯುತ ಹೋರಾಟಕ್ಕೆ ಇನ್ನೂ ಮುಂದೆ ಬಿಜೆಪಿ ಸಾಥ್ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಕಾರ್ಖಾನೆ‌ಯವರು ಸಿಎಸ್ ಆರ್ ಅನುದಾನ ಯಾರಿಗೆ ಕೊಟ್ಟಿದ್ದಾರೆಂದು ಬಹಿರಂಗ ಪಡಿಸಬೇಕು, ಕೆಲಸದಿಂದ ತೆಗೆದಿರುವ ಸ್ಥಳೀಯ ನೌಕರರನ್ನು ಮತ್ತೆ ಮರಳಿ ನೇಮಕಾತಿ ಮಾಡಿಕೊಳ್ಳಬೇಕು, ಸರೋಜಿನಿ ಮಹಿಷಿ ವರದಿ ಪ್ರಕಾರ 65% ಸ್ಥಳೀಯರನ್ನು ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ತೂಕ ಯಂತ್ರ ಈವರೆಗೆ ಕಾರ್ಖಾನೆಯ ಹೊರಗೆ ಸ್ಥಾಪಿಸಿಲ್ಲ ಹೀಗಾಗಿ ರೈತ ಮುಖಂಡರು, ಕಂದಾಯ ಇಲಾಖೆಯವರು, ಕಾರ್ಖಾನೆಯವ ಒಂದು ಸಾರ್ವಜನಿಕ ಕಮೀಟಿ ರಚಿಸಿ ಅವರ  ಅಧಿನದಲ್ಲೇ ತೂಕ ಮಾಡುವ ವ್ಯವಸ್ಥೆ ಮಾಡಬೇಕು, ಲಗಾನಿ ಸಮಸ್ಯೆ ಬಗೆಹರಿಸಬೇಕು ಇದಕ್ಕಾಗಿ ಸಹಾಯವಾಣಿಯೊಂದನ್ನು ರಚಿಸಬೇಕೆಂದು ಒತ್ತಾಯಿಸಲಾಯಿತು.
ಭಾನುವಾರ ಹೋರಾಟ ನೀರತ ಕಬ್ಬು ಬೆಳೆಗಾರ ರೈತರೊಂದಿಗೆ ಜಂಟಿ ಸಭೆ ನಡೆಸಿ ರೈತರ ಬೇಡಿಕೆ ಈಡೇರುವವರೆಗೆ ಹೋರಾಟದಲ್ಲಿ ಬಿಜೆಪಿ ಪಾಲ್ಗೊಳ್ಳಲಿದೆ ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ, ಇದು ನಿಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ ನೀವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ನಿಮ್ಮ ಕಬ್ಬು ಪಡೆಯಲು ಸಾಕಷ್ಟು ಕಾರ್ಖಾನೆಗಳಿದ್ದು ನಿಶ್ಚಿಂತೆ ಇಂದ ಇರುವಂತೆ ಸುನಿಲ್ ಹೆಗಡೆ ಕರೆ ನೀಡಿದರು.
ವಿಪ ಮಾಜಿ ಸದಸ್ಯ ಎಸ್ ಎಲ್ ಘೋಟ್ನೇಕರ ಮಾತನಾಡಿ,ಕಾರ್ಖಾನೆ ರೈತರಿಗೆ ಹಗಲು ಮೋಸ ಮಾಡುತ್ತಿದೆ‌. ಸ್ಥಳೀಯ ಶಾಸಕರಿಗೆ ರೈತರ ಸಮಸ್ಯೆ ಕಾಣಿಸುತ್ತಿಲ್ಲವೇ ? ಎಂದು ಖಾರವಾಗಿ ಪ್ರಶ್ನೀಸಿದ ಅವರು ರೈತರಿಗೆ ನ್ಯಾಯ ದೊರಕದೆ ಇದ್ದಲ್ಲಿ ಅಧಿಕಾರಿಗಳನ್ನು ಘೇರಾವ್ ಹಾಕುವ ಮೂಲಕ ಹೋರಾಟ ನಡೆಸುವ ಖಡಕ್ ಎಚ್ಚರಿಕೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಮುಖಂಡರಾದ ಮಂಗೇಶ ದೇಶಪಾಂಡೆ, ಸೊಣಪ್ಪಾ ಸುಣಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net