ಟೇಬಲ್‌ ಟೆನಿಸ್‌ ಹಳಿಯಾಳದ ನಾಲ್ವರು ರಾಷ್ಟ್ರ ಮಟ್ಟಕ್ಕೆ

Haliyal-students
Published on

ಹಳಿಯಾಳ: ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಹಳಿಯಾಳ ತಾಲೂಕಿನ ನಾಲ್ಕೂ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆಂದು ತರಬೇತುದಾರ ಉದಯ ಜಾಧವ ತಿಳಿಸಿದ್ದಾರೆ.

ಡಿಸೆಂಬರ್ 5 ರಿಂದ 7 ರವರೆಗೆ 3 ದಿನಗಳವರೆಗೆ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ 35 ಜಿಲ್ಲೆಗಳಿಂದ ಆಗಮಿಸಿದ ತಂಡಗಳಲ್ಲಿ ಹಳಿಯಾಳ ತಾಲೂಕಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಬಾಲಕರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಸ್ಪರ್ದೆ ನೀಡಿ ಫೈನಲ್ ಪ್ರವೇಶಿಸಿ ಬೆಂಗಳೂರು ದಕ್ಷಿಣ ತಂಡದೊAದಿಗೆ ವಿರೋಚಿತವಾಗಿ ಹೋರಾಡಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

17 ವರ್ಷದ ಒಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗದಲ್ಲಿ : ರಿತಿನ ನಿತಿನ ವಾವಳ ಹಾಗೂ ಆದರ್ಶ ಶಶಿಧರ ಬುಲ್ಲಾ, 14 ವರ್ಷದ ಒಳಗಿನ ಪ್ರಾಥಮಿಕ ಶಾಲಾ ವಿಭಾಗದಲ್ಲಿ : ಅನಂತಕೃಷ್ಣ ಐತಾಳ ಹಾಗೂ ರಾಘವ ಆರ್ . ಪಾಟೀಲ.

ಈ ಎಲ್ಲ ವಿದ್ಯಾರ್ಥಿಗಳು ಹಳಿಯಾಳ ಪಟ್ಟಣದ ಕ್ರೀಡಾ ಭವನದ ಕ್ರೀಡಾಪಟುಗಳಾಗಿದ್ದು ಕ್ರೀಡಾಪ್ರೇಮಿ, ಟಿಟಿ ತರಬೇತಿದಾರ ಉದಯ ಜಾಧವ ಮತ್ತು ತಂಡದ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net