ಹಳಿಯಾಳ ಹೋರಾಟಗಾರರ ಪುತ್ಥಳಿಗೆ ಮಾಲಾರ್ಪಣೆ

11-hly malarpane
Published on

ಹಳಿಯಾಳ: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಹಳಿಯಾಳ ಮಂಡಲ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಭಾನುವಾರದಿಂದ ಆ. 15ರವರೆಗೆ ಸತತ 5 ದಿನಗಳ ಕಾಲ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.

ಅಭಿಯಾನದ ಮೊದಲನೇ ದಿನ ಭಾನುವಾರ ದೇಶದ ಸ್ವಾತಂತ್ರ್ಯ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರ ಸುಭಾಸ ಚಂದ್ರ ಭೋಸ್ ಹಾಗೂ ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ನಂತರ ಮಹಾನ್ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸಿ ಅವರು ಮಾತನಾಡಿದರು. ಪಕ್ಷದ ಹಳಿಯಾಳ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಸಂಚಾಲಕ ಸಂತೋಷ ಘಟಕಾಂಬಳೆ ಮಾತನಾಡಿ, ಆ. 12ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಮಹಾಗಣಪತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವ ಮೋರ್ಚಾ ವತಿಯಿಂದ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು ಎಂದರು. ಅಭಿಯಾನದ ಸಹ ಸಂಚಾಲಕ ಯಲ್ಲಪ್ಪ ಹೆಳವರ, ರಾಜು ಹುಟಗೀಕರ, ಸೋನಪ್ಪ ಸುಣಕಾರ, ಹನುಮಂತ ಚಿನಗಿನಕೊಪ್ಪ, ತಾನಾಜಿ ಪಟ್ಟೇಕರ, ಚಂದ್ರಕಾಂತ ಕಮ್ಮಾರ, ಜ್ಞಾನೇಶ ಮಾನಗೆ, ಡೋಂಗ್ರು ಕೇಸರೇಕರ, ಶಕುಂತಲಾ ಜಾಧವ, ಮಾಲಾ ಹುಂಡೇಕರ, ಸುನೀಲ ಬಾಗಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net