

ಹಳಿಯಾಳ: ಪಟ್ಟಣದ ಕರ್ನಾಟಕ ಒನ್ ಕೇಂದ್ರ ಹಾಗೂ ಪುರಸಭೆಯಲ್ಲಿ ತೆರೆಯಲಾದ ಗೃಹಲಕ್ಷ್ಮಿಯೋಜನೆಯ ನೋಂದಣಿ ಕೌಂಟರ್‌ಗಳಿಗೆ ಸೋಮವಾರ ಶಾಸಕ ಆರ್.ವಿ. ದೇಶಪಾಂಡೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹೊಸ ಪುರಸಭೆಯಲ್ಲಿರುವ ಗೃಹಲಕ್ಷ್ಮಿ ನೋಂದಣಿ ಕೇಂದ್ರಕ್ಕೆ ತೆರಳಿ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರೊಂದಿಗೆ ಚರ್ಚಿಸಿದರು. ಕಾಂಗ್ರೆಸ್ ಮುಖಂಡ ಕೃಷ್ಣ ಪಾಟೀಲ, ಸುಭಾಷ ಕೊರ್ವೇಕರ, ಅಜರುದ್ದೀನ್ ಬಸರಿಕಟ್ಟಿ, ಸುವರ್ಣ ಮಾದರ, ಶಂಕರ ಬೆಳಗಾಂವಕರ, ಉಮೇಶ ಬೋಳಶೆಟ್ಟಿ ಇತರರು ಇದ್ದರು.