ದೇಶದ ಏಳಿಗೆಗೆ ಯುವಕರು ಕೊಡುಗೆ ನೀಡಲಿ

HLY KLV COLEG
Published on

ಹಳಿಯಾಳ: ಭಾರತ ವಿಶ್ವಗುರು ಸ್ಥಾನದಲ್ಲಿದ್ದು, ಯುವಕರು ದೇಶದ ಸಮಗ್ರ ಏಳಿಗೆಗಾಗಿ ಕೊಡುಗೆ ನೀಡಬೇಕು ಎಂದು ಧಾರವಾಡ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ವಿನಾಯಕ ಭಟ್ ಹೇಳಿದರು.
ಪಟ್ಟಣದ ಕೆಎಲ್‌ಎಸ್ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, 2023-24ನೆ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನದ ಪ್ರೇರಣಾ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಪಸ್ಸಿನಂತೆ ವಿದ್ಯಾಭ್ಯಾಸ ಮಾಡಬೇಕು. ನಿರಂತರ ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯ. ಯಶಸ್ಸಿಗೆ ಕಠಿಣ ಪ್ರಯತ್ನವೇ ಅವಶ್ಯಕ ಎಂದು ಉದಾಹರಣೆಗಳ ಸಮೇತ ತಿಳಿಸಿದರು.
ಪ್ರಾಚಾರ್ಯ ಶ್ರೀನಿವಾಸ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಇದು ಮಹತ್ವದ ಹಂತವಾಗಿದ್ದು, ಎಲ್ಲರೂ ಉತ್ತಮ ವಿದ್ಯಾಭ್ಯಾಸ ಮಾಡಿ ಸಾಧಕರಾಗಬೇಕು ಎಂದರು.
ಶೈಕ್ಷಣಿಕ ಸಂಯೋಜಕ ಉದಯ ರೇವಣಕರ, ಉಪನ್ಯಾಸಕಿ ಸುಜಾತಾ ಹಂಡಿ, ಷಣ್ಮುಖ ದಂಡಿನ, ನಿಫಾ ಮಾಸ್ಕರನೀಸ್, ಪ್ರೀತಿ ತೇಲಿ, ಎಂ.ವಿ. ಕಿರಣಕುಮಾರ, ಸಪ್ನಾ ಸಾಳುಂಕೆ, ವರುಣ ಪಾಟೀಲ, ರಾಜೇಶ ಹೆಗಡೆ, ಮಂಜುನಾಥ ಭೋವಿ ಇದ್ದರು.
ಅನನ್ಯಾ ಕುಬಸದ, ಅಫೀಫಾ ಮುಲ್ಲಾ ಸ್ವಾಗತಿಸಿದರು. ಸಂಪದಾ ಬೋಬಾಟಿ, ಜಿದ್ನಾಸಾ ಕಮ್ಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net