ಲಿಂಗಪಟ್ಟಣ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

5hgr1
Published on

ಹಲಗೂರು:ಸಮೀಪದ ಲಿಂಗಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವರಾಮು ಮತ್ತು ಉಪಾಧ್ಯಕ್ಷರಾಗಿ ಪದ್ಮಾ ಅವಿರೋಧ ಆಯ್ಕೆಯಾದರು. 11 ನಿರ್ದೇಶಕರನ್ನು ಒಳಗೊಂಡ ಸಂಘಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಿವರಾಮು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಾ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರಗಳು ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಡಿ.ಆಶಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ನಂತರ ಅಧ್ಯಕ್ಷ ಶಿವರಾಮು ಮಾತನಾಡಿ, ಅವಿರೋಧ ಆಯ್ಕೆ ಮಾಡಿದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು. ಸಂಘದ ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಏಳಿಗೆಗೆ ಶ್ರಮಿಸುವೆ ಎಂದು ಭರವಸೆ ನೀಡಿದರು. ಸಂಘದ ಸದಸ್ಯರು ಪ್ರತಿದಿನವೂ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ನಿರ್ದೇಶಕರಾದ ಬಿ.ಗಂಗಾಧರ, ಎಲ್.ಸಿ.ಮಂಜು, ಉಮೇಶ, ಬಾಲು ಮಹದೇವ, ಎಲ್.ಎಸ್. ರಮೇಶ, ಚಿಕ್ಕ ಹುಚ್ಚಹೆಗಡೆ, ಜೀವನ್, ಕಾಳಯ್ಯ, ಪುಟ್ಟಮ್ಮ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಕೃಷ್ಣೇಗೌಡ, ಸಿಬ್ಬಂದಿ ಸಿದ್ದೇಗೌಡ, ಮುಖಂಡರಾದ ಶಿವನಂಜು, ಶಿವಲಿಂಗೇಗೌಡ, ಲಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net