ಹಾಫ್ ಮ್ಯಾರಥಾನ್ ಅ. 27ರಂದು

marathon
Published on

ಹುಬ್ಬಳ್ಳಿ: ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಂಬಂಧ ಯಂಗ್ ಇಂಡಿಯನ್ಸ್, ಕೆಎಂಸಿಆರ್​ಐ, ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಆಂತರ್ಯ ನರ-ಮನೋರೋಗ ಸಂಸ್ಥೆ ಸೇರಿ ಇತರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಗರದಲ್ಲಿ ಅ. 27ರಂದು ಬೆಳಗ್ಗೆ 6.30ಕ್ಕೆ 2ಕಿ.ಮೀ. ಮತ್ತು 5 ಕಿ.ಮೀ. ಹಾಫ್ ಮ್ಯಾರಥಾನ್ ಏರ್ಪಾಟಾಗಿದೆ.

ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕೆಎಂಸಿಆರ್​ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಗುರುಸಿದ್ದಪ್ಪ ಯಲಗಚ್ಚಿನ, ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಸೋಮಶೇಖರ ಬಿಜ್ಜಳ ಅತಿಥಿಗಳಾಗಿ ಆಗಮಿಸುವರು. ಹಾಫ್ ಮ್ಯಾರಥಾನ್, ನಗರದ ಕೆಎಂಸಿಆರ್​ಐ ಆವರಣದಿಂದ ತೋಳನಕೆರೆ ಮತ್ತೆ ತೋಳನಕೆರೆಯಿಂದ ಕೆಎಂಸಿಆರ್​ಐವರೆಗೆ ನಡೆಯಲಿದೆ. ಧಾರವಾಡ, ಬೆಳಗಾವಿ, ಹಾವೇರಿ, ಗದಗ ಸೇರಿ ಇತರ ಜಿಲ್ಲೆಯಿಂದ 650ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net