ವೀರಭದ್ರೇಶ್ವರ ಕಾರ್ತಿಕ ಮಹೋತ್ಸವ ಸಂಪನ್ನ

Untitled design (15)
ಮುದಗಲ್ನಲ್ಲಿ ವೀರಭದ್ರೇಶ್ವರ ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಪುರವಂತಿಕೆ ಸೇವೆ ನಡೆಯಿತು.
Published on

ಮುದಗಲ್: ಹಳೇಪೇಟೆ ವೀರಭದ್ರೇಶ್ವರ ಕಾರ್ತಿಕ ಮಹೋತ್ಸವ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ವೀರಭದ್ರೇಶ್ವರ ಮೂರ್ತಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಇತರ ಪೂಜಾ ವಿಧಿ ವಿಧಾನಗಳು ನಡೆದವು. ವೀರಭದ್ರ ದೇವರ ಕಳಸ ಮೆರವಣಿಗೆಯಲ್ಲಿ ಪುರವಂತಿಕೆ ಸೇವೆ ಹಾಗೂ ವಿವಿಧ ಮಂಗಳ ವಾದ್ಯಗಳೊಂದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಲಾಯಿತು.

ವೀರಭದ್ರ ದೇವರ ಕಳಸ ಮೆರವಣಿಗೆಯಲ್ಲಿ ಪುರವಂತಿಕೆ ಸೇವೆ

ಸಂಜೆ ಕಾರ್ತಿಕೋತ್ಸವದ ದೀಪಾಲಂಕಾರದೊಂದಿಗೆ ಕಲಶಾರೋಹಣ ನೆರವೇರಿಸುವದರೊಂದಿಗೆ ಕಾರ್ತಿಕೋತ್ಸವ ಸಂಪನ್ನಗೊಂಡಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಮುಖರಾದ ಚನ್ನಬಸಯ್ಯ ಸ್ವಾಮಿ ಮಟ್ಟೂರು, ಮಹೇಶ ವಸ್ತ್ರದ್, ರಾಚಪ್ಪ ಗುಡೂರು, ಮಹಾಂತೇಶ ಬನ್ನಿಗೋಳ, ಅಮರೇಶ, ವೀರೇಶ, ಉಮೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net