ಹಳೇನಿಜಗಲ್ ಡೇರಿಗೆ ಅವಿರೋಧ ಆಯ್ಕೆ

dairy election
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರ ಹೋಬಳಿಯ ಹಳೇನಿಜಗಲ್ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶುಕ್ರವಾರ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಜಿ.ಗೋಂವಿದಯ್ಯ ಹಾಗೂ ಉಪಾಧ್ಯಕ್ಷರಾಗಿ ವನಜಾಕ್ಷಮ್ಮ ಅವಿರೋಧವಾಗಿ ಆಯ್ಕೆಯಾದ್ದಾರೆ ಎಂದು ಚುನಾವಣಾಧಿಕಾರಿ ಭಾಸ್ಕರ್ ತಿಳಿಸಿದರು.
ಅಧ್ಯಕ್ಷ ಜಿ.ಗೋಂವಿದಯ್ಯ ಮಾತನಾಡಿ, ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಬೇಕು. ಹಾಗೆಯೇ, ಬೂಸಾ, ಹಿಂಡಿ ಹಾಗೂ ಇನ್ನಿತರ ವಸ್ತುಗಳ ಬೆಲೆ ಕಡಿಮೆ ಮಾಡಬೇಕು. ಈ ಕುರಿತಂತೆ ಹಾಲು ಒಕ್ಕೂಟಕ್ಕೆ ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಮನವಿ ಮಾಡಲಾಗುವುದು ಎಂದರು.
ಗ್ರಾಪಂ ಸದಸ್ಯರಾದ ಎಚ್.ಜಿ.ರವಿಕುಮಾರ, ಶೋಭಾ ಗಂಗರಾಜು, ಪುಷ್ಪಾಕಲಾ ಶ್ರೀನಿವಾಸ, ಮುಖಂಡರಾದ ಎನ್.ವಿ.ಗೋಪಿನಾಥ, ತಿಮ್ಮೇಗೌಡ, ಎಸ್.ಆರ್.ಸಿದ್ದಪ್ಪ, ಎಚ್.ಚಂದ್ರಶೇಖರ, ಎಚ್.ಎಂ.ರವಿಕುಮಾರ, ವೆಂಕಟರಾಜು ಚಿಕ್ಕರಾಜು, ರುದ್ರೇಶ, ಎಚ್.ಎಂ. ಶ್ರೀನಿವಾಸ, ಕೆಂಪದೇವರು, ಟಿ.ಟಿ.ಶ್ರೀನಿವಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net