ವ್ಯಕ್ತಿತ್ವ ವಿಕಸನಕ್ಕೆ ಆಧ್ಯಾತ್ಮ ಅವಶ್ಯ

Halaswamy, Shravan, Program,
Published on

ಬಸವಾಪಟ್ಟಣ: ಕ್ರೀಡೆ ವ್ಯಕ್ತಿಯ ದೈಹಿಕ ಬೆಳವಣಿಗೆಗೆ ಕಾರಣವಾದರೆ, ಆಧ್ಯಾತ್ಮ ಜ್ಞಾನವು ವ್ಯಕ್ತಿತ್ವದ ವಿಕಸನಕ್ಕೆ ಅವಶ್ಯ ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್. ಮಧುಕುಮಾರ್ ಅಭಿಪ್ರಾಯಪಟ್ಟರು.

ಗ್ರಾಮದ ಹಾಲಸ್ವಾಮಿ ಗದ್ದಿಗೆ ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ಅಂತರಂಗ ಮತ್ತು ಬಹಿರಂಗ ಎರಡನ್ನೂ ಪರಿಶುದ್ಧಗೊಳಿಸಲು ಜ್ಞಾನ ಸಂಪತ್ತು ಅಗತ್ಯ ಎಂದರು.

ಉದ್ವೇಗ, ಒತ್ತಡ, ಆತಂಕಗಳಿಗೆ ಸಿಲುಕಿರುವ ಜನರಿಗೆ ಆಧ್ಯಾತ್ಮದ ಕಾರ್ಯಕ್ರಮಗಳು ನವಚೈತನ್ಯ ತಂದು ಕೊಡುತ್ತವೆ. ಮನುಷ್ಯರ ನಡುವಿನ ದ್ವೇಷ, ಅಸೂಯೆ, ಈರ್ಷೆ ಮನೋಭಾವದ ಸಣ್ಣತನದ ಗೋಡೆಗಳನ್ನು ಕೆಡವಲು ಸಹಾಯಕವಾಗಿವೆ ಎಂದರು.

ಗವಿಮಠದ ಶ್ರೀ ಶಿವಕುಮಾರ ಹಾಲಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಸಿದ್ದಪ್ಪ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪದ್ಮಪ್ಪ ಮಾತನಾಡಿದರು. ಮಠದ ಕೆ.ವೀರಯ್ಯ ಮತ್ತಿತರು ಇದ್ದರು.

ಸಂಗೀತ ಕಾರ್ಯಕ್ರಮ ನಡೆಯಿತು. ಮಂಜಣ್ಣ ನಿರೂಪಿಸಿದರು. ಸಂಗಾಹಳ್ಳಿ ಸುರೇಶ್ ಸ್ವಾಗತಿಸಿದರೆ, ಎಚ್.ವಿದ್ಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net