

ನ್ಯಾಮತಿ: ತಾಲೂಕಿನ ಗೋವಿನಕೋವಿ ಶ್ರೀ ಹಾಲಸ್ವಾಮಿ ಬೃಹನ್ಮಠದಲ್ಲಿ ಫೆ.27 ಮತ್ತು 28ರಂದು ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಹಾಲಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಗಳ ಪಟ್ಟಾಧಿಕಾರದ ಪ್ರಥಮ ವರ್ಷದ ವರ್ಧಂತ್ಯುತ್ಸವ ನಡೆಯಲಿದೆ.
ಫೆ.27ರ ಸಂಜೆ ದುರ್ಗಾ ಹೋಮ, ಮಹಾ ಮಂಗಳಾರತಿ, ಧರ್ಮ ಸಭೆ ನಡೆಯಲಿದ್ದು ನಾಡಿನ ಹರ ಗುರು ಚರಮೂರ್ತಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು, ಸಂಘ ಸಂಸ್ಥೆ ಮುಖಂಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಫೆ.28ರ ಬೆಳಗ್ಗೆ ಪಲ್ಲಕ್ಕಿ ಉತ್ಸವ, ತೇಜಿ ಉತ್ಸವ ನಂತರ ರಕ್ತದಾನ ಶಿಬಿರ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಸರ್ವರೂ ಕಾರ್ಯಕ್ರಮಕ್ಕೆ ನೆರವು ನೀಡಿ ಭಾಗವಹಿಸುವಂತೆ ಹಾಲಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.