ಮೇ 18, 19 ರಂದು ಮಂಗಳೂರಿನಲ್ಲಿ ಏಳನೇ ವರ್ಷದ ಹಲಸಿನ ಹಬ್ಬ

halasu
Published on

ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇದರ ಏಳನೇ ವರ್ಷದ ಹಲಸಿನ ಹಬ್ಬ ನಗರದ ಶರವು ದೇವಸ್ಥಾನ ಪಕ್ಕದ ಬಾಳಂಭಟ್ ಸಭಾಂಗಣದಲ್ಲಿ ಮೇ 18 ಮತ್ತು 19 ರಂದು ಜರುಗಲಿದೆ.
ಪ್ರಥಮ ದಿನ ಬೆಳಗ್ಗೆ 9 ಕ್ಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಎರಡು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸುವರು. ಲೆಕ್ಕ ಪರಿಶೋಧಕ ಚಂದ್ರಶೇಖರ್ ಶೆಟ್ಟಿ ಹಾಗೂ ಕೃಷಿ ಸಾಧಕಿ ಕಿರಣ್ ರಾಜೇಶ್ ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳುವರು. ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಿಂದ ಹಲಸು ಬೆಳಗಾರರು , ಹಲಸು ಹಣ್ಣು, ಹಲಸು ಮೌಲ್ಯವರ್ಧಿತ ಉತ್ಪನ್ನಗಳ, ತಿಂಡಿ ತಿನಿಸುಗಳ ಸುಮಾರು 40 ಮಳಿಗೆಗೆಗಳಿಗೆ ಅವಕಾಶ ಒದಗಿಸಲಾಗುವುದು. ಗ್ರಾಹಕರ ಪ್ರಯೋಜನಕ್ಕಾಗಿ ಕಣಚ್ಚೂರ್ ಆಯುರ್ವೇದ ಆಸ್ಪತ್ರೆಯ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಮಧುಮೇಹ ಪರೀಕ್ಷೆ , ರಕ್ತದೊತ್ತಡ ಪರೀಕ್ಷೆ , ರಕ್ತದಲ್ಲಿನ ಹಿಮೋಗ್ಲೋಬಿನ್ ಮೌಲ್ಯಮಾಪನ, ಮೂಳೆ ಖನಿಜ ಸಾಂದ್ರತೆ ಪರೀಕ್ಷೆ ನಡೆಸಲಾಗುವುದಬಳಗದ ಪ್ರಕಟಣೆ ತಿಳಿಸಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net