ಹಾಲಸಿದ್ಧನಾಥ ಕಾರ್ಖಾನೆಗೆ ಪ್ರಶಸ್ತಿ

140
ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಉತ್ತಮ ತಾಂತ್ರಿಕ ಕಾರ್ಯಕ್ಷಮತೆ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ಅಧ್ಯಕ್ಷ ಮಲಗೊಂಡ ಪಾಟೀಲ, ಪವನ ಪಾಟೀಲ, ಶಿವ ಕುಲಕರ್ಣಿ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು.
Published on

ನಿಪ್ಪಾಣಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಸಹಕಾರ ಹಾಗೂ ಮಾರ್ಗದರ್ಶನದ ಲವಾಗಿ ನಮ್ಮ ಕಾರ್ಖಾನೆಗೆ ಉತ್ತಮ ತಾಂತ್ರಿಕ ಕಾರ್ಯಕ್ಷಮತೆ ಪ್ರಶಸ್ತಿ ಲಭಿಸಿದೆ ಎಂದು ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ ಹೇಳಿದರು.

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳ ತಾಂತ್ರಿಕ ಸಾಮರ್ಥ್ಯ ವಿಶ್ಲೇಷಿಸಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು 2022-23ನೇ ಸಾಲಿನ ಸಹಕಾರಿ ಕಾರ್ಖಾನೆಯ ವಿಭಾಗದಲ್ಲಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕೊಡಮಾಡಿದ ಉತ್ತಮ ತಾಂತ್ರಿಕ ಕಾರ್ಯಕ್ಷಮತೆ ಪ್ರಶಸ್ತಿಯನ್ನು ಕಬ್ಬು ಅಭಿವದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರಿಂದ ಸ್ವೀಕರಿಸಿದ ನಂತರ ನಿಪ್ಪಾಣಿ ನಗರದ ಕಾರ್ಖಾನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.

ಕಾರ್ಖಾನೆ ಹಾಗೂ ಕಾರ್ಮಿಕರು ಕಷ್ಟದಲ್ಲಿದ್ದಾಗ ಜೊಲ್ಲೆ ದಂಪತಿ ಹುರಿದುಂಬಿಸಿ ಕಾರ್ಖಾನೆ ಸುಸ್ಥಿತಿಗೆ ತಂದು ರೈತರಿಗೆ ಆಸರೆಯಾದರು. ಇದೀಗ ಸುಮಾರು ಮೂರು ಪಟ್ಟು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಿದ್ದಾರೆ. ಕಾರ್ಖಾನೆ ಕಾರ್ಮಿಕರಿಗೆ ಸಂಜೀವಿನಿಯಾಗಿದೆ ಎಂದರು.

ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಸಾಸನೆ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ, ಕಚೇರಿ ಅಧೀಕ್ಷಕ ರಾಜೇಂದ್ರ ಖರಾಬೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net