ಸಿಎಂ ಬೊಮ್ಮಾಯಿ ದಿಟ್ಟತನದ ನಿರ್ಧಾರ

26KKNR-05
ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಶಿಫಾರಸು ಹಿನ್ನಲೆಯಲ್ಲಿ ಸಚಿವ ಹಾಲಪ್ಪ ಆಚಾರ್ ಅವರನ್ನು ಒಳಮೀಸಲಾತಿ ಸಮಾಜದ ಮುಖಂಡರು ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಸಚಿವರ ಕಚೇರಿಯಲ್ಲಿ ಭಾನುವಾರ ಸನ್ಮಾನಿಸಿದರು. ಪ್ರಮುಖರಾದ ಯಮನೂರಪ್ಪ ಗೊರ್ಲೆಕೊಪ್ಪ, ಶಿವಪ್ಪ ಭಂಡಾರಿ, ಮಲಿಯಪ್ಪ ಅಣ್ಣಿಗೇರಿ, ಅಂದಪ್ಪ ಭಂಡಾರಿ ಇತರರಿದ್ದರು.
Published on

ಕುಕನೂರು: ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನ್ಯಾ.ಎ.ಜೆ ಸದಾಶಿವ ಆಯೋಗ ವರದಿಯನ್ನು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್ ಅವರನ್ನು ಒಳಮೀಸಲಾತಿ ಸಮಾಜದ ಮುಖಂಡರು ತಾಲೂಕಿನ ಮಸಬಹಂಚಿನಾಳದಲ್ಲಿ ಭಾನುವಾರ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಹಾಲಪ್ಪ ಆಚಾರ್, ಒಳಮೀಸಲಾತಿ ಜಾರಿಗೆ ತರುವುದೆಂದರೆ, ಜೇನುಗೂಡಿಗೆ ಕಲ್ಲು ಹೊಡೆದಂತೆ ಎನ್ನುವ ಉದ್ದೇಶದಿಂದ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ನಿಮ್ಮ ಬೇಡಿಕೆಗಳನ್ನು ಈಡೇರಿಸಿರಲಿಲ್ಲ. ಆದರೆ, ಸಿಎಂ ಬೊಮ್ಮಾಯಿ ಅವರು ದಿಟ್ಟತನದಿಂದ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ನಮ್ಮ ಪಕ್ಷದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಸಚಿವ ಗೋವಿಂದ ಕಾರಜೋಳ ಸೇರಿ ಇತರ ನಾಯಕರಿಂದ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದೆ ಎಂದರು.

ಪ್ರಮುಖರಾದ ಯಮನೂರಪ್ಪ ಗೊರ್ಲೆಕೊಪ್ಪ, ಶಿವಪ್ಪ ಭಂಡಾರಿ, ಮಲಿಯಪ್ಪ ಅಣ್ಣಿಗೇರಿ, ಅಂದಪ್ಪ ಭಂಡಾರಿ, ಮಾರುತಿ ಗಾವರಾಳ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಶರಣಪ್ಪ ಚಲವಾದಿ, ಸಿದ್ದು ಮಣ್ಣಿನವರ್, ನೀಲಪ್ಪ, ಶ್ರೀನಿವಾಸ, ಮಲ್ಲಿಕಾರ್ಜುನ ಹುಲ್ಲೂರು, ಮಹೇಶ ಹಿರೇಮನಿ, ಸುಜಾತಾ ಗೊರ್ಲೆಕೊಪ್ಪ, ಲಕ್ಷ್ಮಣ ಬಾರಿಗಿಡ, ಲಕ್ಷ್ಮಣ ಕಾಳಿ, ಕೆಂಚಪ್ಪ, ಸಾರೇಪ್ಪ, ಮಜರಪ್ಪ, ಹುಲಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net